Slide
Slide
Slide
previous arrow
next arrow

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಶಾಸಕ ಹೆಬ್ಬಾರ್

300x250 AD

ಬನವಾಸಿ: ಬಡ ಜನತೆಗೆ ತೊಂದರೆಯಾಗದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಯಲ್ಲಾಪುರ ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಸಮೀಪದ ಗುಡ್ನಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಜ್ಜರಣಿ ಗ್ರಾಮದ ಬಡ ಜನರಿಗೆ 94 ಸಿ ಅಡಿಯಲ್ಲಿ ಆಸ್ತಿ ಖಾತಾ ಪತ್ರ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿ, ಖಾತಾ ಪತ್ರವನ್ನು ವಿತರಿಸಿ ಮಾತನಾಡಿ, ನಿಮ್ಮ ಹಲವು ವರ್ಷಗಳ ಕನಸು ಈ ದಿನ ನನಸಾಗಿದೆ. ವಸತಿ ಯೋಜನೆಯಲ್ಲಿ ಆಯ್ಕೆಯಾದ 24 ಫಲಾನುಭವಿಗಳು ತಮ್ಮ ಆಸ್ತಿಗೆ ಸ್ವಂತ ಮಾಲಿಕರಾಗಿದ್ದಾರೆ. ಬಡತನ ಹಾಗೂ ತಿಳುವಳಿಕೆಯ ಕೊರತೆಯಿಂದಾಗಿ 87 ಕುಟುಂಬದವರು ಅರ್ಜಿ ಸಲ್ಲಿಸಿರುವುದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈಗ ಅರ್ಜಿ ಸಲ್ಲಿಕೆಯ ಕಾರ್ಯ ಸ್ಥಗಿತಗೊಂಡಿರುವುದರಿಂದ ಈ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಸರ್ಕಾರ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಲ್ಲಿ ಶಾಸಕನಾಗಿ ಅಧಿಕಾರಿಗಳೊಂದಿಗೆ ಅರ್ಜಿ ಸಲ್ಲಿಸುವ ಕಾರ್ಯದಲ್ಲಿ ಭಾಗವಹಿಸುತ್ತೇನೆ ಎಂದರು.

ಶಿರಸಿ ತಹಶೀಲ್ದಾರ ಶ್ರೀಧರ ಮುಂದಲಮನಿ ಮಾತನಾಡಿ, ವಸತಿ ಯೋಜನೆ ಅಡಿಯಲ್ಲಿ ಅರ್ಜಿ ನೀಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಅತ್ಯಂತ ವೇಗವಾಗಿ ಹಕ್ಕುಪತ್ರ ವಿತರಣಾ ಕಾರ್ಯ ಮಾಡಲಾಗಿದೆ. 87 ಬಡ ಕುಟುಂಬದವರು ಅರ್ಜಿ ಸಲ್ಲಿಕೆಯನ್ನು ಮಾಡಿರುವುದಿಲ್ಲ. ಈ ಕುರಿತು ಸರ್ಕಾರಕ್ಕೆ ಮನವಿ ನೀಡಲಾಗಿದೆ. ಸರ್ಕಾರ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದರೆ ಇವರನ್ನು ಫಲಾನುಭವಿಯಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

300x250 AD

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ ಅಣ್ಣಪ್ಪ ಮಡಿವಾಳ, ಗುಡ್ನಾಪೂರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ್, ಗ್ರಾಪಂ ಸದಸ್ಯರಾದ ರಘು ನಾಯ್ಕ್, ಜ್ಯೋತಿ ನಾಯ್ಕ್, ಸತೀಶ್ ಗೌಡ, ಶ್ರೀಪಾದ ಚನ್ನಯ್ಯ, ಚನ್ನಮ್ಮ ಚನ್ನಯ್ಯ, ಪಂಚಾಯತ ಅಭಿವೃದ್ಧಿ ಅಧಿಕಾರಿ ಗೋಪಾಲ ಪಟಗಾರ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ್, ಮುಖಂಡರಾದ ದ್ಯಾಮಣ್ಣ ದೊಡ್ಮನಿ, ಶಿವಕುಮಾರ ದೇಸಾಯಿ ಗೌಡ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಇದ್ದರು.

Share This
300x250 AD
300x250 AD
300x250 AD
Back to top