Slide
Slide
Slide
previous arrow
next arrow

ಹೆಗ್ಗಾರಿನ ಕಲ್ಪತರು ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಯಶಸ್ವಿ

300x250 AD

ಅಂಕೋಲಾ: ತಾಲೂಕಿನ ಹೆಗ್ಗಾರದಲ್ಲಿ ಕಲ್ಪತರು ವಿವಿಧೋದ್ದೇಶಗಳ ಸಹಕಾರಿ ಸಂಘದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸುರೇಶ್ವಂದ್ರ ಕೆಶಿನ್ಮನೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಂದಿನ ಪೀಳಿಗೆಯ ಜನರಿಗೆ ಸಹಕಾರಿ ಸಂಸ್ಥೆಯ ಬಗೆಗಿನ ಮಹತ್ವವನ್ನು ತಿಳಿಸುವ ಅವಶ್ಯಕತೆ ಇದೆ‌‌ ಎಂದು ಕಲ್ಪತರು ಸಹಕಾರಿ ಸಂಘದ ಸಾಧನೆಯ ಕುರಿತು ಶ್ಲಾಘಿಸಿದರು. ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಬೀರಣ್ಣ ನಾಯಕ ಸಂಘದ ಧ್ವಜಾರೋಹಣ ನೇರವೇರಿಸಿದರು. ಕಲ್ಪತರು ಸಹಕಾರಿ ಸಂಘದ ಅಧ್ಯಕ್ಷ ಶಿವರಾಮ ಭಟ್ ಗುಡ್ಡೆ ಪ್ರಾಸ್ತಾವಿಕ ಮಾತನಾಡಿ ಪುನರ್ವಸತಿ ಪ್ರದೇಶದಲ್ಲಿ ಗಟ್ಟಿ ಸಮರ್ಥ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತ ಕಲ್ಪತರು ಸಹಕಾರಿ ಸಂಘದ ಹಿನ್ನಲೆಯನ್ನು ವಿವರಿಸಿದರು. ಕೆಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರಾದ ಆರ್‌.ಜಿ ಭಾಗ್ವತ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ 25 ವಸಂತಗಳನ್ನು ಪೂರೈಸಿದ ಕಲ್ಪತರು ಸೇವಾ ಸಹಕಾರಿ ಸಂಘದ ಸಾಧನೆಯನ್ನು ಶ್ಲಾಘಿಸಿದರು. ರಜತ ಮಹೋತ್ಸವ ಸಮಿತಿಯ ಜಿ.ವಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಹಿಂದಿನ ಅಧ್ಯಕ್ಷ, ಉಪಾಧ್ಯಕ್ಷರುಗಳಿಗೆ ಸನ್ಮಾನಿಸಲಾಯಿತು. ಸನ್ಮಾನಿತರು ಸಂಘದ ಅಭಿವೃದ್ಧಿ ಕುರಿತು ಮಾತನಾಡಿದರು. ಪಂಚಾಯತ್ ಸದಸ್ಯ ನಾರಾಯಣ ಭಟ್ ಜಾಯಿಕಾಯಿಮನೆ, ಅಧ್ಯಕ್ಷ ವಿನೋದ ಭಟ್ ಮಾತನಾಡಿದರು. ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶ್ರೀಕೃಷ್ಣ ಭಟ್ ಮಾತನಾಡಿದರು. ಸಂಜೆಯ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಿಗೆ ಸನ್ಮಾನ ಮತ್ತು ಸಾಂಕೇತಿಕವಾಗಿ ಸದಸ್ಯರಿಗೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.

ಸಂಜೆಯ ಕಾರ್ಯಕ್ರಮದಲ್ಲಿ ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ ಭಟ್ ಅಗ್ಗಾಶಿಕುಂಬ್ರಿ, ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವಕರ್, ರಾಮನಗುಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಶ್ರೀಕೃಷ್ಣ ಭಟ್, ನಾರಾಯಣ ಭಟ್ ಉಪಸ್ಥಿತರಿದ್ದರು. ಸುಧಾಕರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶೇಖರ್ ಗಾಂವಕರ್ ವಂದಿಸಿದರು. ಸಂಜೆ ಶಿವರಾಮ ಭಾಗ್ವತ್ ಹಾಗೂ ಸಂಗಡಿಗರಿಂದ ಹಾಗೂ ಸರಿಗಮಪ ಖ್ಯಾತಿಯ ಶರಧೀ ಪಾಟೀಲ್, ಗಗನ್ ಗಾಂವ್ಕರ್ ರಿಂದ ಗಾನ ಸೌರಭ ಕಾರ್ಯಕ್ರಮ ನಡೆಯಿತು. ರಾತ್ರಿ ದಕ್ಷಿಣೋತ್ತರ ಕಲಾವಿದರಿಂದ ಶ್ವೇತಕುಮಾರ ಚರಿತ್ರೆ ಯಕ್ಷಗಾನ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳು, ವ್ಯವಸ್ಥಾಪಕರು, ಸಿಬ್ಬಂದಿಗಳು, ಊರನಾಗರಿಕರು ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top