Slide
Slide
Slide
previous arrow
next arrow

ಜನತಾ ಕಾಲೋನಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

300x250 AD

ದಾಂಡೇಲಿ: ನಗರದ ಸಮೀಪದಲ್ಲಿರುವ ಜನತಾ ಕಾಲೋನಿಯಲ್ಲಿ ಆರೋಗ್ಯ ಭಾರತಿ ಮತ್ತು ಏಕಲವ್ಯ ವಿದ್ಯಾಲಯದ ಸಂಯುಕ್ತ ಆಶ್ರಯದಡಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣು ತಪಾಸಣಾ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಶಿಬಿರದ ಆರಂಭದಲ್ಲಿ ವಾಸುದೇವ ಪ್ರಭು ಅವರು ನೇತ್ರ ತಪಾಸಣಾ ಶಿಬಿರದ ಉದ್ದೇಶ ಮತ್ತು ಆರೋಗ್ಯ ಭಾರತಿಯ ಕಾರ್ಯಕ್ರಮಗಳ ವಿವರ ನೀಡಿದರು.

ಆರೋಗ್ಯ ಭಾರತಿಯ ಅಧ್ಯಕ್ಷರಾದ ಸುಧಾಕರ ಶೆಟ್ಟಿ, ವೈದ್ಯರಾದ ಡಾ.ರೇಖಾ ಹೆಗಡೆ, ನೇತ್ರ ತಪಾಸಕರಾದ ಧಾರವಾಡದ ಎಸ್.ಎಸ್.ಭೋಂಸ್ಲೆ, ಹಾಗೂ ರಮಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

300x250 AD

ಈ ಸಂದರ್ಭದಲ್ಲಿ ಪ್ರಮುಖರಾದ ರವಿ ಕಂಬದಕೋಣೆ, ರತ್ನಾಕರ್ ಗಾಂವ್ಕರ್, ಅಶೋಕ ಬ್ಯಾಳಿ, ವರದಾ ಜೋಶಿ, ವರ್ಷಾ ಪರಾಂಜಪೆ, ಕವಿತಾ ಪೂಜಾರ್, ಆಶಾ ಗುನಗಾ, ಪೂಜಾ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top