ಶಿರಸಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಡನಕೇರಿಯಲ್ಲಿ ಗಣರಾಜ್ಯೋತ್ಸವವು ಸಂಭ್ರಮ ಸಡಗರದಿಂದ ನಡೆಯಿತು. ದಾನಿಗಳ ಸಹಕಾರದಿಂದ 65 ಸಾವಿರ ರೂ ವೆಚ್ಚದಲ್ಲಿ ನಿರ್ಮಿಸಿದ ನೂತನ ಧ್ವಜಕಟ್ಟೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಅಣ್ಣಪ್ಪ ನಾಯ್ಕ ಧ್ವಜಾರೋಹಣ ನೆರವೇರಿಸಿದರು. ನಂತರ ನೂತನ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನೆರವೇರಿತು. ದಾನಿಗಳಾದ ಶಿವಾನಂದ ಭಟ್ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ನೂತನ ವೇದಿಕೆಯನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಅಣ್ಣಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ರೇಖಾ ಗೌಡರ್, ಹಲಗದ್ದೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ರೇಣುಕಾ ತಳವಾರ, ಪಂಚಾಯತ್ ಸದಸ್ಯರಾದ ಸದಾನಂದ ನಾಯ್ಕ, ಮಂಜುಳಾ ಕಬ್ಬೇರ, ಗ್ರಾ.ಪಂ.ಕಾರ್ಯದರ್ಶಿ ವೀರಪ್ಪ ಚೆನ್ನಯ್ಯ, ಗ್ರಾಮದ ಅಧ್ಯಕ್ಷರಾದ ದ್ಯಾವಾ ನಾಯ್ಕ, ಪ್ರಮುಖರಾದ ಮಂಜುನಾಥ್ ನಾಯ್ಕ, ಮಹೇಶ ಪರ್ಶ್ಯಾ ನಾಯ್ಕ, ಗ್ರಾಮ ಅರಣ್ಯ ಸಮಿತಿಯ ಬಸವರಾಜ, ಮುಖ್ಯಾಧ್ಯಾಪಕರಾದ ಶ್ರೀಮತಿ ಎಚ್.ಪಿ.ಗೀತಾ,ಕೊರ್ಲಕಟ್ಟಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ನಾಗೇಶ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಕೃಷ್ಣಮೂರ್ತಿ ಹಾಗೂ ಶರತ್ ಉಪಸ್ಥಿತರಿದ್ದರು. ಶಿಕ್ಷಕರಾದ ಎನ್.ಎಸ್.ಭಾಗ್ವತ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ದಾನಿಗಳ ಕೊಡುಗೆ ಸ್ಮರಿಸಿದರು. ಶಿಕ್ಷಕ ದರ್ಶನ ಶೆಟ್ಟಿ ವಂದಿಸಿದರು. ನಂತರ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ 5 ಘಂಟೆಯವರೆಗೂ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು 400 ಕ್ಕೂ ಅಧಿಕ ಸಂಖ್ಯೆಯ ಸಾರ್ವಜನಿಕರು ವೀಕ್ಷಿಸಿದರು. ದಾನಿಗಳು ಹಾಗೂ ಪೂರ್ವ ವಿದ್ಯಾರ್ಥಿಗಳು ಆಗಮಿಸಿದ್ದ ಎಲ್ಲರಿಗೂ ಬೆಳಗಿನ ಉಪಹಾರ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿದ್ದರು.