Slide
Slide
Slide
previous arrow
next arrow

ಟಿ.ಎಸ್.ಎಸ್.ನಲ್ಲಿ ಗಣರಾಜ್ಯೋತ್ಸವ ಆಚರಣೆ

300x250 AD

ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇದರ ಪ್ರಧಾನ ಕಛೇರಿಯಲ್ಲಿ 75ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಲಾಯಿತು. ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೆಂ.ವೈದ್ಯ ಮತ್ತಿಘಟ್ಟ ಧ್ವಜಾರೋಹಣವನ್ನು ನೆರವೇರಿಸಿದರು.ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಎಂ.ಎನ್ ಭಟ್ಟ ತೋಟಿಮನೆ ಹಾಗೂ ನಿರ್ದೇಶಕರುಗಳು, ಸಂಘದ ಪ್ರಭಾರಿ ಪ್ರಧಾನ ವ್ಯವಸ್ಥಾಪಕರಾದ ವಿಜಯಾನಂದ ಸು.ಭಟ್ಟ, ಅಡಿಕೆ ವರ್ತಕರು, ಸಂಘದ ಸಿಬ್ಬಂದಿಗಳು, ಸದಸ್ಯರು, ಸಂಘದ ನಿವೃತ್ತ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಘದ ಸಿದ್ದಾಪುರ, ಯಲ್ಲಾಪುರ, ಹಾಗೂ ಮುಂಡಗೋಡ ಶಾಖೆಗಳಲ್ಲೂ ಧ್ವಜಾರೋಹಣ ಕಾರ್ಯಕ್ರವನ್ನು ನೆರವೇರಿಸಲಾಯಿತು.ಸಂಘದ ಶಾಖಾ ವ್ಯವಸ್ಥಾಪಕರು, ಸ್ಥಳೀಯ ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿಗಳು ಹಾಜರಾಗಿ ಧ್ವಜ ವಂದನೆ ಸಲ್ಲಿಸಿದರು.

300x250 AD
Share This
300x250 AD
300x250 AD
300x250 AD
Back to top