Slide
Slide
Slide
previous arrow
next arrow

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ: ಚಿತ್ರಕಲಾ ಸ್ಪರ್ಧೆ

300x250 AD

ದಾಂಡೇಲಿ: ಕಾರವಾರ ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾಂಡೇಲಿ ತಾಲ್ಲೂಕು ಪಂಚಾಯಿತಿ ಹಾಗೂ ಹಳಿಯಾಳದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಜನತಾ ವಿದ್ಯಾಲಯ ಇವುಗಳ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಜನತಾ ವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ವಿದ್ಯಾರ್ಥಿನಿಯರಿಗಾಗಿ ಚಿತ್ರಕಲಾ ಸ್ಪರ್ಧೆ ನಡೆಯಿತು.

ಜನತಾ ವಿದ್ಯಾಲಯ ಮುಖ್ಯೋಪಾಧ್ಯಾಯ ಎಮ್. ಬಿ ಅರವಳ್ಳಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿನ ಸುಪ್ತವಾಗಿರುವ ಪ್ರತಿಭೆಯ ಮೂಲಕ ಕಲೆಯ ಅನಾವರಣಕ್ಕೆ ಇಂತಹ ವೇದಿಕೆಗಳು ಹಾಗೂ ಸ್ಪರ್ಧೆಗಳು ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಜನತಾ ವಿದ್ಯಾಲಯ ಚಿತ್ರಕಲಾ ಶಿಕ್ಷಕ ಅಬ್ದುಲ್ ರಜಾಕ್ ಭಾಗವಾನ್ ಹಾಗೂ ರೋಟರಿ ಶಾಲೆಯ ರವಿ ಶಾನಭಾಗ ಇವರುಗಳು ಚಿತ್ರಕಲಾ ಸ್ಪರ್ಧೆಯ ನಿರ್ಮಾಣಯಕರಾಗಿ ಭಾಗವಹಿಸಿ ಮಕ್ಕಳಿಗೆ ಚಿತ್ರ ಕಲೆ ಕಲಿಕೆಯಲ್ಲಿ ಇರಬೇಕಾದ ಕೌಶಲ್ಯ ಹಾಗೂ ಬಣ್ಣಗಳ ಸಂಯೋಜನೆಯ ಬಗ್ಗೆ ತಿಳಿ ಹೇಳಿದರು. ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿಯರಾದ ಅನಸೂಯಾ ರೆಡ್ಡಕರ, ಅಂಬಿಕಾ ಕಟಕೆ, ಅಂಗನವಾಡಿ ಕಾರ್ಯಕರ್ತೆಯರಾದ ಸುಲೋಚನಾ,ಮಂಜುಳಾ ಉಪಸ್ಥಿತರಿದ್ದರು.

300x250 AD

ತಾಲೂಕಿನ ವಿವಿಧ ಶಾಲೆಗಳ 45 ವಿದ್ಯಾರ್ಥಿನಿಯರು ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿ ಬೇಟಿ ಪಡಾವೋ ಬೇಟಿ ಬಚಾವೋ ವಿಷಯದಲ್ಲಿ ಚಿತ್ರ ಬಿಡಿಸಿದರು. “ಬೇಟಿ ಪಡಾವೋ ಬೇಟಿ ಬಚಾವೋ “ಕುರಿತು ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಗಳಿಗೆ ಪ್ರತಿಜ್ಞಾ ವಿಧಿಯನ್ನು ವಿಧಿಯನ್ನು ಭೋದಿಸಿಲಾಯಿತು.

Share This
300x250 AD
300x250 AD
300x250 AD
Back to top