ಕಾರವಾರ: ನಗರದ ದಿವೇಕರ್ ವಾಣಿಜ್ಯ ಕಾಲೇಜ್ನ ಕಾಲೇಜ್ನ ಸಭಾಭವನದಲ್ಲಿ ಹಳೆಯ ವಿದ್ಯಾರ್ಥಿ ಸಂಘದಿಂದ ಸಂಸ್ಥಾಪಕ ಪ್ರಾಂಶುಪಾಲರ ಕುರಿತಾದ ಲೇಖನಗಳಿರುವ ‘ಅದಮ್ಯ ಚೇತನ ದಿ. ಪ್ರೊ.ಜಿ.ವಿ.ಭಟ್’ ಎಂಬ ಕೃತಿಯನ್ನು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಬಿಡುಗಡೆ ಮಾಡಿದರು. ನಂತರ ಮಾತನಾಡಿ, ಇದೊಂದು ವಿಶೇಷ ಪುಸ್ತಕ. ಇಂದು ಇಡೀ ಜಗತ್ತು ಸೆಲ್ಫಿ ಮೋಡಿನಲ್ಲಿದೆ. ಮನುಷ್ಯಲೋಕದ ಸಂಪರ್ಕವೇ ಇಲ್ಲದಂತೆ ಬದುಕುತ್ತಿದ್ದೇವೆ. ಬೆಳಿಗ್ಗೆ ಎದ್ದು ಮೊಬೈಲ್ ಮೂಲಕ ಗುಡ್ ಮಾರ್ನಿಂಗ್ ಹೇಳುವವರು ಎದುರಿಗೆ ಸಿಕ್ಕರೂ ಒಂದು ಸಣ್ಣ ನಗುವನ್ನು ಬೀರುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿ ಬೇಕಿದೆ. ಪ್ರೀತಿಯ ಅಂತಃಕರಣದ ಮನವರಿಕೆಯ ಪುಸ್ತಕ ಇದಾಗಿದ್ದು, ಅಂಥ ಅಪರೂಪದ ವ್ಯಕ್ತಿ ಪ್ರೊ.ಜಿ.ವಿ.ಭಟ್ ಎಂದು ಬಣ್ಣಿಸಿದರು.
ಹಿರಿಯ ಪತ್ರಕರ್ತ ಜಿ.ಯು.ಭಟ್ ಮಾತನಾಡಿ, ಅದಮ್ಯ ಚೇತನ ಜಿ.ವಿ.ಭಟ್ ಅವರ ಆದರ್ಶಗಳು ಎಲ್ಲರು ಮೆಚ್ಚುವಂತದ್ದು. ಅವರ ವ್ಯಕ್ತಿತ್ವವನ್ನು ಈ ಪುಸ್ತಕದ ಮೂಲಕ ಮುಂದಿನ ಪಿಳಿಗೆಗೆ ಪರಿಚಯಿಸುವ ಕಾರ್ಯ ಉತ್ತಮವಾಗಿದೆ ಎಂದು ಹೇಳಿದರು.ಪುಸ್ತಕದ ಸಂಪಾದಕ ಡಾ.ಜಿ.ವಿ.ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆನರಾ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಎಸ್.ಪಿ.ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕದ ಇನ್ನೊಬ್ಬ ಸಂಪಾದಕ ಆರ್.ಎಸ್.ಹಬ್ಬು, ಕಾಲೇಜ್ನ ಪ್ರಾಂಶುಪಾಲ ಕೇಶವ ಕೆ.ಜಿ., ದಿ.ಜಿ.ವಿ.ಭಟ್ ಅವರ ಪತ್ನಿ ಅನಸೂಯಾ ಭಟ್, ಕಾಲೇಜ್ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಮ್ತಿಯಾಜ್ ಸಯ್ಯದ್, ಕಾರ್ಯದರ್ಶಿ ಅಜಯ ಸಾಹುಕಾರ್ ಉಪಸ್ಥಿತರಿದ್ದರು.