ಹಳಿಯಾಳ: ಪಟ್ಟಣದಲ್ಲಿರುವ ಶ್ರೀ.ವಿ.ಆರ್.ಡಿ.ಎಮ್ ಟ್ರಸ್ಟ್ ಕಾರ್ಯಾಲಯಕ್ಕೆ ಕೇಂದ್ರ ನೀತಿ ಆಯೋಗದ ಉಪ ಕಾರ್ಯದರ್ಶಿ ಸೋಯಬ್ ಅಹ್ಮದ್ ಕಲಾಲ ಮಂಗಳವಾರ ಭೇಟಿ ನೀಡಿ, ವಿ.ಆರ್.ಡಿ.ಎಂ ಟ್ರಸ್ಟಿನ ಅಂಗ ಸಂಸ್ಥೆಗಳಾದ ದೇಶಪಾಂಡೆ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಗೆ ಬೇಟಿ ನೀಡಿ ಇವುಗಳು ನಿರ್ವಹಿಸುವ ಕಾರ್ಯ ವೈಖರಿಯ ಕುರಿತು ತಿಳಿದುಕೊಂಡರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಆಡಳಿತ ಅಧಿಕಾರಿ ಪ್ರಕಾಶ ಪ್ರಭು ವಿ.ಆರ್.ಡಿ.ಎಮ್. ಟ್ರಸ್ಟ್ ನಡೆದು ಬಂದು ಹಾದಿಯ ಕುರಿತು ಸವಿವರವಾಗಿ ನೀತಿ ಆಯೋಗದ ಉಪ ಕಾರ್ಯದರ್ಶಿಗಳಿಗೆ ತಿಳಿಸಿದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಗೆ ಭೇಟಿ ನೀಡಿದ ಹಿನ್ನಲೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ ಬಡ್ಡಿ ಸಂಸ್ಥೆಯ ಕುರಿತು ಪರಿಚಯ ಮಾಡಿದರು. ಸಂಸ್ಥೆಯಲ್ಲಿ ಸ್ವ ಉದ್ಯೋಗ ತರಬೇತಿ ಪಡಿಯುತ್ತಿರುವ ಶಿಬಿರಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಸ್ವ ಉದ್ಯೋಗ ತರಬೇತಿಯ ಉಪಯೋಗ ಹಾಗೂ ಅದರಿಂದ ವ್ಯಕ್ತಿಗೆ ಹಾಗೂ ದೇಶಕ್ಕೆ ಆಗುವ ಲಾಭದ ಕುರಿತು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ನಬಾರ್ಡಿನ ಡಿ.ಡಿ ಎಮ್. ಆದ ರೇಜಿಸ್ ಕೆ.ಎಸ್ ಹಾಗೂ ಪ್ರಶಾಂತ ನಾಯ್ಕ್, ಲೀಡ ಬ್ಯಾಂಕ್ ಮ್ಯಾನೇಜರ್ ಕಾರವಾರ ಮತ್ತು ಡಿವಿಜನಲ್ ಮ್ಯಾನೇಜರ್ ಪಿ. ಮಾದವ ಸುರೇಶ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.