ಹೊನ್ನಾವರ: ಭಾರತದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಡುವ ದಿನ. ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಹೊನ್ನಾವರ ತಾಲೂಕಿನ ಚಂದಾವರದ ಶ್ರೀ ಹನುಮಂತ ದೇವಸ್ಥಾನದಲ್ಲಿ ಶಾಸಕ ದಿನಕರ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆಯ ನಂತರ ದೇವಸ್ಥಾನದ ಆವರಣದಲ್ಲಿ ರಾಮ ಭಕ್ತಿ ಜಾಗರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕರಸೇವೆಯಲ್ಲಿ ಪಾಲ್ಗೊಂಡಿದ್ದ ಮಹಾಪುರುಷರುಗಳಾದ ಸತ್ಯನಾರಾಯಣ ಹೆಗಡೆ, ಮಹಾದೇವ ಪಟಗಾರ, ಅನಂತ ಶಾನಭಾಗ, ನಾರಾಯಣ ಗೌಡ, ಗಣೇಶ ಬಾಲಕೃಷ್ಣ ಕಿಣಿ, ರವಿ ಹೆಗಡೆ, ಮಹೇಶ ಗುನಗಾ, ತುಳಸು ಗೌಡ, ನರಸಿಂಹ ಶಾನಭಾಗ ಇವರೆಲ್ಲರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಅಯೋಧ್ಯೆಯ ರಾಮಮಂದಿರದಲ್ಲಿ ಗಣಪತಿಯ ವಿಗ್ರಹವನ್ನು ಕೆತ್ತನೆಮಾಡಿರುವ ಕೆಕ್ಕಾರಿನ ಯುವ ಶಿಲ್ಪಿ ವಿನಾಯಕ ತುಳಸು ಗೌಡ ಅವರನ್ನು ಸನ್ಮಾನಿಸಲಾಯಿತು. ಯುವ ನೇತಾರ ಭಾಸ್ಕರ ಚಂದಾವರ, ಚಂದಾವರ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ಎ. ಆರ್. ನಾಯ್ಕ್, ಎನ್. ಎಸ್. ನಾಯ್ಕ್, ಎಮ್. ಕೆ. ಪಟಗಾರ, ದೆವು ಗೌಡ, ಉಮೇಶ ನಾಯ್ಕ್, ಆರ್. ಜಿ. ನಾಯ್ಕ್, ಆನಂದ ನಾಯ್ಕ್, ಸೀತಾರಾಮ ನಾಯ್ಕ್, ಕೃಷ್ಣ ಗೌಡ, ಗುರು ಐಗಳ್, ಗುರು ಗೌಡ, ಮಂಜುನಾಥ್ ಮಡಿವಾಳ ಹಾಗೂ ಇತರರು ಇದ್ದರು.