ಸಿದ್ದಾಪುರ: ಅಯೋಧ್ಯೆಯಲ್ಲಿ ಜರುಗಿದ ಶ್ರೀರಾಮನ ಪ್ರತಿಷ್ಠಾನದ ಅಂಗವಾಗಿ ತಾಲೂಕಿನ ವಿವಿಧ ದೇವಾಲಯದಲ್ಲಿ ಭಜನೆ, ಶ್ರೀರಾಮತಾರಕ ಜಪಯಜ್ಞ, ಶ್ರೀರಾಮತಾರಕ ಹವನ, ಭಜನೆ, ಕರಸೇವಕರಿಗೆ ಸನ್ಮಾನ, ಅನ್ನಸಂತರ್ಪಣೆ ಅಲ್ಲದೇ ವಿಶೇಷವಾಗಿ ಅಯೋಧ್ಯೆಯಲ್ಲಿ ಜರುಗಿದ ಶ್ರೀರಾಮ ಪ್ರತಿಷ್ಠಾನದ ನೇರವೀಕ್ಷಣೆಯನ್ನು ಜನತೆ ಕಣ್ತುಂಬಿಕೊಂಡರು.
ತಾಲೂಕಿನ ಭುವನಗಿರಿ ಭುವನೇಶ್ವರಿ ದೇವಸ್ಥಾನದಲ್ಲಿ, ಭಾನ್ಕುಳಿಯ ಶ್ರೀರಾಮದೇವ ಮಠದಲ್ಲಿ, ಕಾನಸೂರಿನ ರುದ್ರಾಂಜನೇಯ ದೇವಸ್ಥಾನದಲ್ಲಿ, ಹೇರೂರು-ಅತ್ತೀಮುರುಡು ರಾಮಾಂಜನೇಯ ದೇವಸ್ಥಾನ, ಸಿದ್ದಾಪುರದ ಶಂಕರಮಠ, ದುರ್ಗಾವಿನಾಯಕ ದೇವಸ್ಥಾನ ವಾಜಗದ್ದೆ,ಶ್ರೀಮನ್ನೆಲೆಮಾವಿನ ಮಠ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿವಿವಿಧ ಧಾರ್ಮಿಕ ಕಾರ್ಯಕ್ರಮ, ಭಜನೆ ಅನ್ನಸಂತರ್ಪಣೆ ನಡೆಯಿತು. ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಅಯೋಧ್ಯೆಯಲ್ಲಿ ಜರುಗಿದ ಶ್ರೀರಾಮನ ಪ್ರತಿಷ್ಠಾಪನೆಯ ನೇರವೀಕ್ಷಣೆ, ಪ್ರಸಾದ ವಿತರಣೆ ಹಾಗೂ ಕರಸೇವಕರಾಗಿ ಪಾಲ್ಗೊಂಡಿದ್ದ ಅನಂತ ತಿಮ್ಮಪ್ಪ ಹೆಗಡೆ ಊರತೋಟ ಅವರನ್ನು ಶ್ರೀರಾಮ ಭಕ್ತರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಾಧ್ಯಾಪಕ ಎಲ್.ಜಿ.ಹೆಗಡೆ, ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ, ಜಿ.ಎಂ.ಹೆಗಡೆ ಕರ್ಕಿಸವಲ್, ಅನಂತ ಶಾನಭಾಗ, ಕೃಷ್ಣಾ ಬಾಯಿ ಶಾನಭಾಗ, ರಾಜಾರಾಮ ಹೆಗಡೆ, ಮಂಜುನಾಥ ನಾಯ್ಕ, ಕೃಷ್ಣ ಗೌಡ, ರವಿ ನಾಯ್ಕ, ಪೂರ್ಣಚಂದ್ರ ಹೆಗಡೆ, ಗುರುಮೂರ್ತಿ ಶಾನಭಾಗ, ರಮೇಶ ಹೆಗಡೆ ಹಾರ್ಸಿಮನೆ ಇತರರಿದ್ದರು.