ಹೊನ್ನಾವರ: ತಾಲೂಕಿನ ಕಡತೋಕಾದ ಪ್ರಸಿದ್ದ ಶ್ರೀ ಸ್ವಯಂಭೂ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಜನವರಿ 22 ಅಯೋದ್ಯೆಯ ರಾಮಮಂದಿರದಲ್ಲಿ ನಡೆಯುವ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಶುಭಸಂದರ್ಭದಲ್ಲಿ ಕಡತೋಕದ ಗ್ರಾಮದೇವಾಲಯ ಶ್ರೀ ಸ್ವಯಂಭು ದೇವಾಲಯದಲ್ಲಿ ಒಳಾವರಣ ಸ್ವಚ್ಛತೆ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕ, ಗ್ರಾಮ ಪಂಚಾಯತ ಅಧ್ಯಕ್ಷೆ ಸಾವಿತ್ರಿ ಶ್ರೀಕೃಷ್ಣ ಭಟ್ಟ, ಶಂಭು ಹೆಗಡೆ ಸಂತನ್, ವಿ ಎಫ್ ಸಿ ಅಧ್ಯಕ್ಷ ಎಲ್.ಎನ್.ಭಟ್ಟ, ಅಣ್ಣಪ್ಪ ಹೆಗಡೆ, ಶ್ರೀನಾಥ ಶೆಟ್ಟಿ, ಎನ್.ಆರ್.ಹೆಗಡೆ ನವಿಲಗೋಣ, ಬಾಲು ಭಂಡಾರಿ, ಗೋಪಾಲಕೃಷ್ಣ ಭಟ್ಟ ಹೆಬ್ಲೆಕೇರಿ, ಗಣೇಶ ಭಟ್ಟ, ಗಜಾನನ ಭಟ್ಟ ಕೆಕ್ಕಾರ, ಕುಮಾರಿ ಭವ್ಯ ಭಟ್ಟ, ಜಗದೀಶ ನಾಯ್ಕ, ಎಚ್.ಎಸ್. ಭಂಡಾರಿ, ಮಂಜು ಮುಕ್ರಿ ಹುಜಿಮುರಿ, ಮಂಜುನಾಥ ಮುಕ್ರಿ ಕಡತೋಕ, ಬೀರಪ್ಪ ಪಟಗಾರ, ಚೇತನ ಹೆಗಡೆ, ಶಂಭು ಮುಕ್ರಿ ಮುಂತಾದವರು ಸ್ವಚ್ಛತೆ ಕೈಗೊಂಡರು.