Slide
Slide
Slide
previous arrow
next arrow

ಕನಕನಹಳ್ಳಿಯಲ್ಲಿ ‘ಯಕ್ಷ ಸಂಕ್ರಾಂತಿ’

300x250 AD

ಅಂಕೋಲಾ: ತಾಲೂಕಿನ ಡೋಂಗ್ರಿ ಪಂಚಾಯತದ ಕನಕನಹಳ್ಳಿಯಲ್ಲಿ ಅತ್ಯಂತ ಸಂಭ್ರಮದಿಂದ ಸಂಕ್ರಾಂತಿಯ ಆಚರಣೆ ನಡೆಯಿತು. ಆಬಾಲವೃಧ್ದರಾದಿಯಾಗಿ ಎಲ್ಲರೂ ಎಳ್ಳು ಬೆಲ್ಲವನ್ನು ಪರಸ್ಪರ ಹಂಚಿ ಶುಭಾಶಯವನ್ನು ಹೇಳುತ್ತಾ ಕಿರಿಯರು ಹಿರಿಯರಿಂದ ಆಶೀರ್ವಾದ ಪಡೆದು ಧನ್ಯತೆಯನ್ನು ಪಡೆದರು. ತದನಂತರ ಮಧ್ಯಾಹ್ನ ಊರಿನ ದೇವಸ್ಥಾನದಲ್ಲಿ ಲಕ್ಷ್ಮೀನರಸಿಂಹ ದೇವರ ಉತ್ಸವ ಆಚರಿಸಿ ಪ್ರಸಾದ ಭೊಜನದಲ್ಲಿ ಭಾಗವಹಿಸಿದರು.

ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯ ವಿನಾಯಕ ಯುವಕ ಸಂಘ (ರಿ)ಕನಕನಹಳ್ಳಿಇವರ ಸಹಯೋಗದಲ್ಲಿ ಯಕ್ಷಗಾನ ನಡೆಯಿತು. ಸಭಾಕಾರ್ಯಕ್ರಮದಲ್ಲಿ ಮುಖ್ಯಾ ಅತಿಥಿ ಅರವಿಂದ ಹೆಗಡೆ ಮಾತನಾಡಿ ನಮ್ಮ ದೇಶ ಹಬ್ಬಗಳ ನಾಡು ಪ್ರತಿಯೊಂದು ಹಬ್ಬಕ್ಕೂ ಅದರದ್ದೆ ಆದ ಹಿನ್ನೆಲೆ ಇದೆ. ಆದರೆ ಒತ್ತಡದ ಬದುಕಿನ ನೆಪವೊಡ್ಡಿ ನಮ್ಮ ಆಚರಣೆ ನಿರ್ಲಕ್ಷ್ಯಕ್ಕೊಳಗಾಗುತ್ತಿರುವುದು ವಿಷಾದನೀಯ ಎಂದರು. ಮುಖ್ಯ ಅತಿಥಿ ಪಂಚಾಯತ್ ಉಪಾಧ್ಯಕ್ಷೆ ಮಮತಾ ನಾಯ್ಕ ಶುಭಕೋರಿದರು. ಅಧ್ಯಕ್ಷರಾದ ಗಜಾನನ ಹರಿಮನೆ ,ಸುಮಾರು ಐವತ್ತು ವರ್ಷಗಳಿಂದ ನಿರಂತರವಾಗಿ ಈ ಸಂಕ್ರಾಂತಿಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಹಬ್ಬದ ಮಹತ್ವವನ್ನುಮುಂದಿನ ಪೀಳಿಗೆಗೆ ತಿಳಿಸುತ್ತಿರುವ ಊರಿನ ಹಿರಿಯರಿಗೆ ಅಭಿನಂದನೆಗಳು, ಇನ್ನು ಯಕ್ಷಗಾನ ಮತ್ತು ಕನ್ನಡದ ಅವಿನಾಭಾವ ಸಂಬಂಧವನ್ನು ಹೊಂದಿದೆ ,ಕನ್ನಡ ಭಾಷೆ ಇತ್ತೀಚಿಗೆ ಅನ್ಯದೇಶಿಯ ಪದಗಳ ಮಿಶ್ರಿತ ಭಾಷೆಯಾಗಿ ಮಾರ್ಪಟ್ಟಿದೆ. ಆದರೆ ಯಕ್ಷಗಾನದಲ್ಲಿ ಮಾತ್ರ ಕನ್ನಡ ಶುದ್ಧವಾಗಿ ಪ್ರಯೋಗಿಸಲ್ಪಡುತ್ತದೆ ಎಂದರು. ತದನಂತರ ಶ್ರೀ ಲಕ್ಷ್ಮೀನರಸಿಂಹ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಕನಕನಹಳ್ಳಿ ಸಂಯೋಜನೆಯಲ್ಲಿ ಪೌರಾಣಿಕ ಯಕ್ಷಗಾನ ಮಾಗಧ ವಧೆ ,ಹಿಮ್ಮೇಳ ಭಾವಗತರಾಗಿ ಶ್ರೀಕೃಷ್ಣ ಹೆಗಡೆ, ಮೃದಂಗ ಶಿವರಾಮ ಕೋಮಾರ, ಚಂಡೆ ಗಣೇಶ ಗಾಂವ್ಕರ್ ಮುಮ್ಮೇಳದಲ್ಲಿ ಶಿವರಾಮ ಗಾಂವ್ಕರ್, ಶಿವಪ್ರಸಾದ ನಾಯ್ಕ,ವಿನಾಯಕ ಬೆಳ್ಳಿ,ರಾಮಕೃಷ್ಣ ಹರಿಮನೆ, ಗಣೇಶ ನಾಯ್ಕ,ನಾರಾಯಣ ಗಾಂವ್ಕರ್, ರಾಜೀವ್, ದೇವಣ್ಣ ಗೌಡ ಇವರ ಸುಂದರ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಈ ಎಲ್ಲಾ ಕಾರ್ಯಕ್ರಮಕ್ಕೆ ಭಾಸ್ಕರ ಗಾಂವ್ಕರ್ ಸ್ವಾಗತಿಸಿದರು, ಸಂಘದ ಅಧ್ಯಕ್ಷರಾದ ಪ್ರತೀಕ್ ಗಾಂವ್ಕರ್ ಅಭಿನಂದಿಸಿದರು.

300x250 AD
Share This
300x250 AD
300x250 AD
300x250 AD
Back to top