ಯಲ್ಲಾಪುರ: ಕೃಷಿ ಕ್ಷೇತ್ರ ಸಮೃದ್ಧವಾಗಿದ್ದರೆ ಮಾತ್ರ ಬದುಕು ಸುಭದ್ರವಾಗಲು ಸಾಧ್ಯ ಎಂದು ತಹಸೀಲ್ದಾರ ಎಂ. ಗುರುರಾಜ ಹೇಳಿದರು.
ಅವರು ಪಟ್ಟಣದ ಟಿಎಂಎಸ್ ಆವಾರದಲ್ಲಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಆಲೆಮನೆ ಹಬ್ಬವನ್ನು ಉದ್ಘಾಟಿಸಿ, ಮಾತನಾಡಿದರು.
ಕಬ್ಬು ಬೆಳೆಗಾರರಾದ ಗೋಪಾಲಕೃಷ್ಣ ಭಟ್ಟ ಹುಲಗೋಡ ಹಾಗೂ ಮೋಹನ ಭಟ್ಟ ಹೊನ್ನಳ್ಳಿ ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಸಂಸ್ಥೆ ವಿವಿಧ ಯೋಜನೆಗಳನ್ನು ತರುತ್ತಿದೆ. ಇದರ ಪೂರ್ಣ ಪ್ರಯೋಜನವನ್ನು ರೈತರು ಪಡೆಯಬೇಕು ಎಂದರು.
ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ನಿರ್ದೇಶಕರಾದ ವೆಂಕಟರಮಣ ಬೆಳ್ಳಿ, ಸುಬ್ಬಣ್ಣ ಬೋಳ್ಮನೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ಮುಖ್ಯಕಾರ್ಯನಿರ್ವಾಹಕ ಸಿ.ಎಸ್.ಹೆಗಡೆ ಇತರರಿದ್ದರು. ವಿ.ಟಿ.ಹೆಗಡೆ ನಿರ್ವಹಿಸಿದರು. ಸಾವಿರಾದು ಜನ ಆಲೆಮನೆ ಹಬ್ಬದಲ್ಲಿ ಭಾಗವಹಿಸಿ, ವಿವಿಧ ಕೌಂಟರ್ ಗಳಲ್ಲಿ ಉಚಿತವಾಗಿ ವಿತರಿಸಲಾದ ಕಬ್ಬಿನಹಾಲು ಹಾಗೂ ಮಂಡಕ್ಕಿ ಸವಿದರು. ರವೀಂದ್ರನಗರದ ಆದರ್ಶ ಮಹಿಳಾ ಮಂಡಳದವರಿಂದ ಭಗವದ್ಗೀತಾ ಪಠಣ ನಡೆಯಿತು. ಪ್ರಾರ್ಥನಾ ಮೆಲೊಡೀಸ್ ತಂಡದವರಿಂದ ನಡೆದ ಗಾನ ಮಂಜರಿ ಕಾರ್ಯಕ್ರಮ ಗಮನ ಸೆಳೆಯಿತು.