ದಾಂಡೇಲಿ: ನಗರಸಭೆಯ ನಾಲ್ಕನೇ ಅವಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಾರ್ಡ್ ನಂ:06 ರ ಸದಸ್ಯೆ ಶಾಹಿದಾ ಪಠಾಣ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ನಗರಸಭೆಯ ಸಭಾಭವನದಲ್ಲಿ ಸಹಾಯಕ ಆಯುಕ್ತರಾದ ಕನಿಷ್ಕ ಶರ್ಮಾ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಜರುಗಿತು. ನಗರಸಭೆಯ ಸದಸ್ಯರಾದ ರುಕ್ಮಿಣಿ ಬಾಗಡೆ ಶಾಹಿದಾ ಪಠಾಣ್ ಹೆಸರನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಪದವಿಗೆ ಸೂಚಿಸಿದರು. ವೆಂಕಟರಮಣಮ್ಮ ಮೈಥುಕುರಿ ಅನುಮೋದಿಸಿದರು. ಅಂತಿಮವಾಗಿ ಸಹಾಯಕ ಆಯುಕ್ತರಾದ ಕನಿಷ್ಕ ಶರ್ಮ ಶಾಹಿದಾ ಪಠಾಣ್ ಅವರನ್ನು ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ನಗರ ಸಭೆಯ ಕಾಂಗ್ರೆಸ್ ಸದಸ್ಯರು ಉಪಸ್ಥಿತರಿದ್ದರು.