Slide
Slide
Slide
previous arrow
next arrow

ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ದಾಂಡೇಲಿಯ ಶಾರದಾ ಪರಶುರಾಮ‌ ನೇಮಕ

300x250 AD

ದಾಂಡೇಲಿ : ದಕ್ಷಿಣ ಕನ್ನಡ ಜಿಲ್ಲೆಯ ಟೆಲಿಕಾಂ ಸಲಹಾ ಸಮಿತಿಯ ಸದಸ್ಯರಾಗಿ ನಗರದ ಬಿಜೆಪಿ ಪ್ರಮುಖರಾದ ಶಾರದಾ ಪರಶುರಾಮ ಆಯ್ಕೆಯಾಗಿದ್ದಾರೆ.

ದಾಂಡೇಲಿ ನಗರಸಭೆಯ ಮಾಜಿ ಸದಸ್ಯರಾಗಿರುವ ಶಾರದಾ ಪರಶುರಾಮ ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾಗಿಯು ಸೇವೆಯನ್ನು ಸಲ್ಲಿಸಿದ್ದರು. ಇದೀಗ ಭಾರತ ಸರ್ಕಾರದ ದೂರಸಂಪರ್ಕ ಸಚಿವಾಲಯವು ಶಾರದಾ ಪರಶುರಾಮ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಟೆಲಿಕಾಂ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿ, ಅಧಿಕೃತ ಆದೇಶವನ್ನು ಹೊರಡಿಸಿದೆ.

300x250 AD

ಟೆಲಿಕಾಂ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಶಾರದಾ ಪರಶುರಾಮ ಅವರನ್ನು ನಗರದ ಗಣ್ಯರನೇಕರು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top