ಹೊನ್ನಾವರ : ಸರ್ಕಾರದ ಆದೇಶದಂತೆ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಮತ್ತು ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ವತಿಯಿಂದ ದಂಡಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಕರ್ನಾಟಕದಲ್ಲಿ ಕನ್ನಡ ಕಡ್ಡಾಯವಾಗಿದ್ದು ಎಲ್ಲಾ ಅಂಗಡಿ ಮುಂಗಟ್ಟು ವಾಣಿಜ್ಯ ಮಳಿಗೆಗಳಲ್ಲಿ ಮುಂತಾದ ಕಟ್ಟಡಗಳಲ್ಲಿ ಶೇಕಡ 60ರಷ್ಟು ಅಳವಡಿಸುವಂತೆ ಕೋರುತ್ತೇವೆ ಮತ್ತು ಕನ್ನಡದ ವಿಚಾರವಾಗಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಅಂತಹ ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಇರಬೇಕು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವ ನಿಟ್ಟಿನಲ್ಲಿ ಕನ್ನಡದ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ ಹೋರಾಟಗಾರರ ಮೇಲೆ ಈಗಾಗಲೇ ಹಲವಾರು ಮೊಕದ್ದಮೆಗಳನ್ನು ಹಾಕಲಾಗಿದ್ದು ಕನ್ನಡ ಪರ ಹೋರಾಟಗಾರರು ದಿನ ನಿತ್ಯ ಕೋರ್ಟು ಕಚೇರಿ ಅಲೆಯುತ್ತಿದ್ದು ಕನ್ನಡ ಅಭಿಮಾನಿಗಳಾದ ತಾವು ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಕ್ಕಾಗಿ ಶ್ರಮಿಸುತ್ತಿರುವ ಕನ್ನಡಪರ ಹೋರಾಟಗಾರರ ಮೇಲಿನ ಕೇಸುಗಳನ್ನು ಹಿಂಪಡೆಯಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಮಯ ಗೊಳ್ಳದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಎಲ್ಲಾ ಕನ್ನಡದ ಅಭಿಮಾನಿಗಳು ಸೇರಿ ಉಗ್ರ ಹೋರಾಟ ನಡೆಸಲಾಗುವುದು ಆಗ್ರಹ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ್ ಗೌಡ ವಿದ್ಯಾರ್ಥಿ ಘಟಕದ ಅಧ್ಯಕ್ಷ ನಿಖಿಲ್ ನಾಯಕ್ ಸಂಘಟನೆ ಮುಖಂಡರ ಸಚಿನ್ ನಾಯ್ಕ ಸಂದೇಶ್ ಮೆಸ್ತ ಎಸ್ ಡಿ ಹೆಗಡೆ ತುಕಾರಾಂ ನಾಯಕ್ ಅಣ್ಣಪ್ಪ ನಾಯಕ್ ಮಂಕಿ ಅಣ್ಣಪ್ಪ ಗೌಡ ಅಪ್ಸರಕೊಂಡ ರಾಜೇಶ್ ನಾಯ್ಕ್ ಕರವೇ ಜಿಲ್ಲಾ ಸಾಮಾಜಿಕ ಜಾಲತಾಣದ ಶ್ರೀಕಾಂತ್ ಪಟಗಾರ ಶಂಕರ್ ಗೌಡ ಗುಣುವಂತೆ ಪ್ರವೀಣ್ ನಾಯ್ಕ್ ಕರ್ಕಿ ಗಣೇಶ್ ಗೌಡ ಮಹಿಳಾ ಮುಖಂಡರಾದ ಜ್ಯೋತಿ ಮಡಿವಾಳ್ ಚಂದ್ರಕಲಾ ಪಟಗಾರ, ನಾಗವೇಣಿ ನಾಯ್ಕ್ ಮುಂತಾದ ಕಾರ್ಯಕರ್ತರು ಹಾಜರಿದ್ದರು.