Slide
Slide
Slide
previous arrow
next arrow

ಹಲ್ಲೆ ಪ್ರಕರಣ: ವಸತಿನಿಲಯದ ಮೂವರು ವಿದ್ಯಾರ್ಥಿಗಳು ಅಮಾನತು

300x250 AD

ಭಟ್ಕಳ: ಪಟ್ಟಣದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿ ಎಫ್.ಯು.ಪೂಜಾರ
ವಸತಿ ನಿಲಯಕ್ಕೆ ಭೇಟಿ ನೀಡಿದರು.

ಮೊದಲು ವಸತಿನಿಲಯದ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಮಾತನಾಡಿದ ಅವರು ಕಳೆದ ಡಿ.31 ರಾತ್ರಿ 11.30 ರಿಂದ 11.50 ನಡುವಿನ ಅವಧಿಯಲ್ಲಿ ನಮ್ಮ ವಸತಿ ನಿಲಯದ ಮೂವರು ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಕೀ ಹಾಕಿದರೂ ಕೂಡ ವಾರ್ಡನ್ ಗಮನಕ್ಕೆ ಬಾರದೆ ಹೊರಗೆ ಹೋಗಿದ್ದರೆ. ಈ ವೇಳೆ ಅಲ್ಲೇ ಹೊರಗಡೆ ಇದ್ದ ಮದ್ಯಪಾನ ಮಾಡಿದ ಮೂವರ ಗುಂಪಿಗು ಮತ್ತು ವಿದ್ಯಾರ್ಥಿಗಳಿಗೂ ವಾಗ್ವಾದ ನಡೆದಿದೆ. ಬಳಿಕ ಅವರು ಮೂವರು ವಿದ್ಯಾರ್ಥಿಗಳಿಗೆ ವಸತಿ ನಿಲಯದವರೆಗೆ ಅಟ್ಟಾಡಿಸಿಗೊಂಡು ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಓರ್ವ ವಿದ್ಯಾರ್ಥಿ ವಸತಿ ನಿಲಯದ ಒಳಗೆ ಬಂದು ಇನ್ನುಳಿದ ವಿದ್ಯಾರ್ಥಿಳಿಗೆ ಮಾಹಿತಿ ನೀಡಿದರು. ನಂತರ ಎಲ್ಲಾ ವಿದ್ಯಾರ್ಥಿಗಳು ವಸತಿ ನಿಲಯದ ಗೇಟ್ ತೆರೆದು ಮತ್ತೆ ಆವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಬಳಿಕ ಮದ್ಯಪಾನ ಮಾಡಿದ ಮೂವರ ಗುಂಪು ವಸತಿ ನಿಲಯದ ಒಳಗೆ ಬಂದು ಬಾಗಿಲು ಬಡಿದು ಒಳ ನುಗ್ಗಿ ಓರ್ವ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ವಿಷಯ ತಿಳಿದು ಅಲ್ಪಸಂಖ್ಯಾತರ ತಾಲೂಕಾಧಿಕಾರಿ ಭೇಟಿ ನೀಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅದೇ ದಿನ ಅವರ ಮೇಲೆ ಪ್ರಕರಣ ದಾಖಲಸಿದ್ದರು.

300x250 AD

ಜೊತೆಗೆ ರಾತ್ರಿ ವೇಳೆಯಲ್ಲಿ ಯಾವುದೇ ಮಾಹಿತಿ ನೀಡದೆ ವಸತಿ ನಿಲಯದಿಂದ ಹೊರಗೆ ಹೋಗಿದ್ದ ಮೂವರು ವಿದ್ಯಾರ್ಥಿಗಳನ್ನು ಕೂಡ ವಸತಿ ನಿಲಯದಿಂದ ಅಮಾನತು ಮಾಡಿ ಅವರ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂದ ಅವರು ಈ ಘಟನೆ ನಡೆಯಲು ಕಾರಣವೇನೆಂದು ಪ್ರಶ್ನಿಸಿ ವಸತಿ ನಿಲಯದ ವಾರ್ಡನ್ ಗೂ ಕೂಡ ನೋಟಿಸಿ ನೀಡಿದ್ದೇನೆ. ಅವರಿಂದ ಉತ್ತರ ಬಂದ ಬಳಿಕ ನಮ್ಮ ಮೇಲಾಧಿಕಾರಿಗಳಿಗೆ ತಿಳಿಸುತ್ತೇನೆ ಹಾಗು ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತೆನೆ ಎಂದರು.

Share This
300x250 AD
300x250 AD
300x250 AD
Back to top