ಜೋಯಿಡಾ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹಾಗೂ ಇತರ ಸಂಸ್ಥೆಯಿಂದ ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರ್.ಡಿ.ಪಿ.ಆರ್ ಇಲಾಖೆಯ ಯೋಜನೆಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಶುಕ್ರವಾರ ಪರಿಶೀಲನೆಯನ್ನು ನಡೆಸಲಾಯಿತು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಸ ವಿಲೇವಾರಿ, ಡಿಜಿಟಲ್ ಲೈಬ್ರೆರಿ, ಆರೋಗ್ಯ ಅಭಿಯಾನ, ಕೂಸಿನ ಮನೆ, ಕುಡಿಯುವ ನೀರಿನ ನಿರ್ವಹಣೆಯ ಬಗ್ಗೆ ಪರಿಶೀಲನೆ ನಡೆಸಿ, ಮನೆಮನೆಗೆ ಭೇಟಿ ನೀಡಿ ಕಸ ನಿರ್ವಹಣೆ, ವಿಂಗಡಣೆ ಇತ್ಯಾದಿಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು. ವಿಶೇಷ ಸಭೆಯನ್ನು ನಡೆಸಿ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ಕಸ ನಿರ್ವಹಣೆ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.
ಆರ್.ಡಿ.ಪಿ.ಆರ್ ಇಲಾಖೆಯ ಅಧಿಕಾರಿಗಳಾದ ದೀಪಿಕಾ.ಸಿ.ಇನಾಂದಾರ್, ಶಿಲ್ಪಾ ಮತ್ತು ತೃಪ್ತಿ ಪೆರ್ಲಾಪು ಅವರು ವಿವಿಧ ಮಾಹಿತಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ಉಳವಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಂಜುನಾಥ ಮುಕಾಶಿ, ಗ್ರಾಮ ಪಂಚಾಯ್ತು ಅಭಿವೃದ್ಧಿ ಅಧಿಕಾರಿ ಎಂ.ಡಿ.ಹನೀಪ್, ಗ್ರಾ.ಪಂ ಸದಸ್ಯರುಗಳಾದ ಜುಬೇರ್ ಶೇಖ, ಮಂಜುಳಾ ವಸ್ತ್ರದ್, ಉಳವಿ ದೇವಸ್ಥಾನದ ವ್ಯವಸ್ಥಾಪಕರು, ಸ್ಥಳೀಯ ಶಾಲೆಯ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.