ಜೊಯಿಡಾ: ರಾಮನಗರದ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಕಾಲೇಜಿನಲ್ಲಿ ಸಂಭ್ರಮಾಚರಣೆ ಸುಂದರವಾಗಿ ನಡೆಯಿತು.
ರಾಮನಗರ ಗ್ರಾಪಂ ಅಧ್ಯಕ್ಷ ಶಿವಾಜಿ ಗೋಸಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ದಿವಂಗತ ಸಚಿವ ಪ್ರಭಾಕರ ರಾಣೆ ಬಡವರ ಏಳಿಗೆಗಾಗಿ ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮಾರ್ಗದರ್ಶಕರಾಗಿದ್ದಾರೆ. ಬಡವರ ಮನದಲ್ಲಿ ರಾಣೆಯವರು ಸದಾ ಇರುತ್ತಾರೆ ಅವರಿಂದ ಸ್ಥಾಪನೆಯಾದ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಈ ವರ್ಷ ರಾಷ್ಟ್ರ ಮಟ್ಟದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು , ಕುಸ್ತಿ ಮತ್ತು ಟೆನ್ನಿಕೊಟ್ ಸ್ಪರ್ಧೆಗಳಲ್ಲಿ ಚಿನ್ನದ, ಕಂಚಿನ ಪದಕ ಪಡೆಯುವ ಮೂಲಕ ಮಿಂಚಿ , ರಾಜ್ಯಕ್ಕೆ ಹೆಸರನ್ನು ತಂದಿದ್ದಾರೆ ಎಂದರು.
ಇದೆ ಸಂದರ್ಭದಲ್ಲಿ ಓಂಕಾರ್ ನೆಸೇಕರ ಟೆನ್ನಿಕೊಟ್ ನಲ್ಲಿ ಚಿನ್ನದ ಪದಕ, (ದೆಹಲಿಯಲ್ಲಿ) ಕುಸ್ತಿಯಲ್ಲಿ ಕಂಚಿನ ಪದಕ ಪಡೆದ ಶಾಲಿನಿ ಸಿದ್ದಿ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಸನ್ಮಾನಿಸಲಾಯಿತು. ಗಣ್ಯರಾದ ಗುರುನಾಥ ಕಾಮತ್ , ವಿನೋದ್ ದೇಸಾಯಿ , ಸಂಜಯ್ ಹರ್ಚಿಕರ್, ಮಂಜುನಾಥ ಪವಾರ್, ಕಿಶೋರ್ ರಾಣೆ , ಗಜೇಂದ್ರ ಗಾಂದ್ಲೆ, ಪಾಂಡುರಂಗ ನಾಯ್ಕ , ಚಂದ್ರಕಾಂತ ದೇಸಾಯಿ , ನಳಿನಿ ಹೆಗಡೆ ಸೇರಿದಂತೆ ಹಲವಾರು ಗಣ್ಯರು ಕಾಲೇಜಿನ ಪ್ರಾಚಾರ್ಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಇದೆ ಸಂದರ್ಭದಲ್ಲಿ ನಿವೃತ್ತರಾಗಿರುವ ಕಾಲೇಜಿನ ಪ್ರಾಂಶುಪಾಲ ಎಂ.ಎಚ್.ನಾಯ್ಕ ಕಾರಣ ಬೀಳ್ಕೊಡುಗೆಯನ್ನು ಆತ್ಮೀಯವಾಗಿ ಮಾಡಲಾಯಿತು.