Slide
Slide
Slide
previous arrow
next arrow

ಬಾಪೂಜಿ ಪಿಯು ಕಾಲೇಜ್ ವಾರ್ಷಿಕೋತ್ಸವ ಸಂಪನ್ನ

300x250 AD

ಜೋಯಿಡಾ : ತಾಲೂಕಿನ ರಾಮನಗರ ಬಾಪೂಜಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಮನಗರ ಗ್ರಾ.ಪಂ.ಅಧ್ಯಕ್ಷರಾದ ಶಿವಾಜಿ ಗೋಸಾವಿ ಅವರು ಜೋಯಿಡಾದಂತಹ ಅತೀ ಹಿಂದುಳಿದ ತಾಲೂಕಿನಲ್ಲಿಯೂ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಈ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಲು ಬಹುಮೂಲ್ಯ ಕೊಡುಗೆಯನ್ನು ನೀಡಿದವರು ದಿವಂಗತ ಪ್ರಭಾಕರ ರಾಣಿಯವರು. ಅವರ ಶೈಕ್ಷಣಿಕ ಕಾಳಜಿ ಮತ್ತು ಬದ್ಧತೆಯನ್ನು ತಾಲೂಕಿನ ಜನತೆ ಸದಾ ಸ್ಮರಿಸಿಕೊಳ್ಳುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಿ.ಜಿ.ವಿ.ಎಸ್ ಸಂಸ್ಥೆಯ ಉಪಾಧ್ಯಕ್ಷರಾದ ಉಲ್ಲಾಸ್ ಎಸ್.ನಾಯ್ಕ ಅವರು ಸಂಸ್ಥೆಯ ಉನ್ನತಿಗೆ ತಾಲೂಕಿನ ಜನತೆ ನೀಡುತ್ತಿರುವ ಸಹಕಾರ ಮತ್ತು ವಿದ್ಯಾರ್ಥಿಗಳ ಪಾಲಕರ ಪ್ರೋತ್ಸಾಹ ಮುಖ್ಯ ಕಾರಣವಾಗಿದೆ.

ಈ ಸಂದರ್ಭದಲ್ಲಿ ಸೂಪಾ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಗುರುನಾಥ ಕಾಮತ್, ಗ್ರಾ.ಪಂ ಸದಸ್ಯ ವಿನೋದ ದೇಸಾಯಿ, ಸಮಾಜ ಸೇವಕ ಸಂಜಯ್ ಹರ್ಚೀರ್ಕರ್, ಬಿ.ಜಿ.ವಿ.ಎಸ್ ಸಂಸ್ಥೆಯ ಪದಾಧಿಕಾರಿಗಳಾದ ಮಂಜುನಾಥ ಪವಾರ್, ಕಿಶೋರ್ ರಾಣೆ, ಪಾಂಡುರಂಗ ನಾಯ್ಕ, ಸ್ಥಳೀಯ ಆಡಳಿತ ಸಮಿತಿ ಅಧ್ಯಕ್ಷ ಗಜೇಂದ್ರ ಗಾಂದಲೇ, ನಿಲು ಸೋಲೆಕರ, ಪ್ರಭಾಕರ ಗಾವಡೆ, ನಾರಾಯಣ ಬಿರ್ಜೆ, ಶಂಭಾಜಿ ಗವಳಕರ್ ಹಾಗೂ ಜೋಯಿಡಾ ಬಿ.ಜಿ.ವಿ..ಎಸ್ ಸ್ಥಳೀಯ ಸಮಿತಿಯ ಸದಸ್ಯರಾದ ಮಾಬ್ಲು ಕುಂದಲಕರ್, ಪ್ರಾಚಾರ್ಯ ಮಂಜುನಾಥ ಶೆಟ್ಟಿ, ಪದವಿ ಕಾಲೇಜಿನ ಪ್ರಾಚಾರ್ಯರಾದ ಅನೀಲಕುಮಾರ ದೇವರ್ಶಿ, ಕಾರ್ಯಕ್ರಮಗಳಲ್ಲಿ ಮರಾಠ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ಡಾ.ಸಾಜಿದ್ ಮತ್ತೂರು, ನಳಿನಿ ಹೆಗಡೆ, ಸುಲೋಚನಾ ಗುನಾಜಿ ದೇಸಾಯಿ, ರಾಜು ಕಡಕೋಳ್ ಮೊದಲಾದವರು ಉಪಸ್ಥಿತರಿದ್ದರು.

300x250 AD

ಕುಸ್ತಿಯಲ್ಲಿ ರಾಷ್ಟ್ರಮಟ್ಟದ ಸಾಧನೆಗೈದ ಶಾಲಿನಿ ಸಿದ್ಧಿ, ಟೆನ್ನಿಕ್ವಾಯ್ಟ್‌ನಲ್ಲಿ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ‌ ಪಡೆದ ಓಂಕಾರ್ ನೆರ್ಸೆಕರ್ ತಂಡಕ್ಕೆ ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಣ ಉಪನ್ಯಾಸಕ ಸಂಜಯ್ ಗೌಡ ಅವರನ್ನು ಹಾಗೂ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಯಶಸ್ಸಿಗೆ ಕಾಲೇಜಿನ ಉಪನ್ಯಾಸಕ ವೃಂದ, ಬೋಧಕ ವೃಂದ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರಮಿಸಿದ್ದರು.

Share This
300x250 AD
300x250 AD
300x250 AD
Back to top