ಕಾರವಾರ: ಧರ್ಮದ ರಕ್ಷಣೆಗಾಗಿ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆಯನ್ನು ಹುಟ್ಟುಹಾಕಿದ್ದು,ಇದು ಪಕ್ಷಾತೀತ ಸಂಘಟನೆಯಾಗಿದೆ. ಎಲ್ಲ ಧರ್ಮದ, ಜಾತಿಯ ಕಷ್ಟಕ್ಕೂ ಬೆಂಬಲವಾಗಿ ನಿಲುತ್ತವೆ ಎಂದು ವೇದಿಕೆಯ ರಾಜ್ಯ ಅಧ್ಯಕ್ಷ ಡಾ. ಗಜೇಂದ್ರ ನಾಯ್ಕ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಆಂಗ್ಲರು ಆಳಿಹೋದ ಬಳಿಕ ನಮ್ಮ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇದರ ಪರಿಣಾಮವಾಗಿ ಯುವಜನತೆಗೆ ಸರಿಯಾಗಿ ಸಂಸ್ಕಾರ ಸಿಗುತ್ತಿಲ್ಲ. ರಾಜಕೀಯ ಪ್ರೇರಿತವಾಗಿ ಧರ್ಮ, ಜಾತಿ ವ್ಯವಸ್ಥೆಯಾಗಿದೆ. ಇದನ್ನು ಬದಲಾಯಿಸಬೇಕಿದೆ. ಧರ್ಮದ ಹೆಸರಿನಲ್ಲಿ ಅನಾಚಾರ ನಡೆಯುತ್ತಿದೆ. ನಮ್ಮ ವೇದಿಕೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಯಾವುದೇ ಧರ್ಮಕ್ಕೂ ಅನ್ಯಾಯವಾದರೂ ಹೋರಾಡುತ್ತೇವೆ. ಪ್ರತಿಭಟಿಸುತ್ತೇವೆ. ಭಾರತೀಯ ಸನಾತನ ಧರ್ಮ ಮರುಸ್ಥಾಪನೆಗೆ ಕಟಿಬದ್ಧರಾಗಿದ್ದೇವೆ ಎಂದು ಹೇಳಿದರು.
ಶಂಕರ ಗುನಗಿ, ಪ್ರಕಾಶ ನಾಯ್ಕ, ಯಶೋಧ ಹೆಗಡೆ, ಸುರೇಶ ನಾಯ್ಕ, ಚಂದ್ರಕಾಂತ್ ನಾಯ್ಕ ಶರತ ಬಾಂದೇಕರ,ಅಶೋಕ ರಾಣೆ, ಬಾಬುರಾಯ ತಳೇಕರ, ಮಹಮ್ಮದ್ ಅಲಿ, ಸುಹಾಸ ತಳೇಕರ, ದಿಲೀಪ ಗೋವೇಕರ ವೆಂಕಟೇಶ ವೆರ್ಣೆಕರ, ರಾಜೇಂದ್ರ ನಾಯ್ಕ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.