Slide
Slide
Slide
previous arrow
next arrow

ಮಣ್ಣು ಮನುಷ್ಯನ ಪಾಪವನ್ನು ತೊಳೆಯುತ್ತದೆ: ಡಾ.ಕೇಶವ ಕಿರಣ್

300x250 AD

ಹೊನ್ನಾವರ: ಗುಣವಂತೆಯಲ್ಲಿರುವ ಒಕ್ಕಲಿಗರ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಣವಂತೆ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಡಾ. ಕೇಶವ ಕಿರಣ್ ಮಣ್ಣು ಮನುಷ್ಯ ಪಾಪವನ್ನು ತೊಳೆಯುತ್ತದೆ. ಆದರೆ ನಾವು ಬೆಳೆಯುವ ಮಣ್ಣಿನ ವಾಸನೆ ನಮಗೆ ಬೇಕಿಲ್ಲ. ಭೂಮಿ ಕೇವಲ ಕಲ್ಲು ಮಣ್ಣುಗಳಿಂದ ಕೂಡಿರುವುದು ಮಾತ್ರವಲ್ಲ. ಈ ಮಣ್ಣಿನಲ್ಲಿ ಅದೆಷ್ಟೋ ಸಂತರು ಓಡಾಡಿದ್ದಾರೆ. ಆಧುನಿಕ ಬುದ್ದಿ ಮತ್ತೆಗೆ ನಮ್ಮ ಆಚರಣೆಗಳು ಮೂಢನಂಬಿಕೆಯಾಗಿ ಕಂಡು ಬರುತ್ತದೆ. ಆದರೆ ಭಾರತೀಯರು ಪ್ರಕೃತಿ ಆರಾಧಕರು ಎಂದರು.

ಮಾಜಿ ಸೈನಿಕರು ಭೂ ನ್ಯಾಯ ಮಂಡಳಿಯ ಸದಸ್ಯರಾದ ತಿಮ್ಮಪ್ಪ ಗೌಡ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ಬಹಳ ಶಿಸ್ತುಬದ್ಧ ಕಾರ್ಯಕ್ರಮ ಆರ್ಥಿಕ ವ್ಯವಹಾರ ಹಾಗೂ ಸ್ವ ಉದ್ಯೋಗವನ್ನು ಇನ್ನಿತರ ಅಭಿವೃದ್ಧಿ ಕಾರ್ಯಕ್ರಮವನ್ನು ಮಾಡಿ ಪರಮಪೂಜ್ಯರು ಇಂತಹ ಉತ್ತಮ ಅವಕಾಶವನ್ನು ಮಾಡಿಕೊಟ್ಟಿರುವುದು ಗ್ರಾಮದ ಜನರಿಗೆ ಬಹಳ ಅನುಕೂಲವಾಗಿದೆ ಎಂದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಳಗಿನೂರು ಗ್ರಾಮ ಪಂಚಾಯಿತ ಅಧ್ಯಕ್ಷರಾದ ಶ್ರೀಮತಿ ಚಿತ್ರಾಕ್ಷಿ ಗೌಡ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಸಂಘದ ಶ್ರೀಮತಿ ವಾಸಂತಿ ಅಮೀನ್ ತಾಲೂಕಿನ ಯೋಜನಾಧಿಕಾರಿಗಳು ಮಾತನಾಡಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ಶುಭ ಹಾರೈಸಿದರು. ಜಗದೀಶ್ ಗೌಡ ಸಾಮೂಹಿಕ ಶ್ರೀ ಸತ್ಯನಾರಾಯಣ ಸಮಿತಿಯ ಅಧ್ಯಕ್ಷರು ಶಂಕರ್ ಗೌಡ ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ವಿಕಲಚೇತನರಿಗೆ ವೀಲ್ ಚೇರ್ ವಿತರಣೆ, ಕ್ರಿಟಿಕಲ್ ಇಲ್ಲೇಸ್ ಸೌಲಭ್ಯ ವಿತರಣೆ, ಹಾಗೂ ಅತಿ ಹೆಚ್ಚು ಪ್ರಗತಿ ನಿಧಿಯ ವ್ಯವಹಾರ ಮಾಡಿದ ಸಂಘಗಳ ಹಾಗೂ ಶ್ರಮವಿನಿಮಯ ನಿರಂತರವಾಗಿ ಮಾಡುವ ಸಂಘಗಳನ್ನು ಗುರುತಿಸಲಾಯಿತು. ಪ್ರಾರ್ಥನೆಯನ್ನು ಶ್ರೀಮತಿ ಪದ್ಮ ಗೌಡ ನಡೆಸಿಕೊಟ್ಟರು. ನಿರೂಪಣೆಯನ್ನು ಗೋಪಾಲ್ ನಾಯ್ಕ್ ವಿಚಕ್ಷಣಾಧಿಕಾರಿ ಹಾಗೂ ಶ್ರೀಮತಿ ವಿನಯ ಶೆಟ್ಟಿ ಜಾನ್ವಿಕಾಸ ಸಮನ್ವಯಾಧಿಕಾರಿ ಇವರು ನಿರ್ವಹಿಸಿದರು. ಉದಯ ನಾಯ್ಕ ಗುಣವಂತೆ ಸ್ವಾಗತಿಸಿ ವಲಯದ ಸಾಧನ ವರದಿಯನ್ನು ಮಂಡಿಸಿದರೆ, ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀಮತಿ ಜ್ಯೋತಿ ಗೌಡ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮವನ್ನು ನಡೆಸಲಾಯಿತು.

Share This
300x250 AD
300x250 AD
300x250 AD
Back to top