ಕಾರವಾರ: ಕಾರವಾರ ರೋಟರಿ ಕ್ಲಬ್ ಹಾಗೂ ರೋಟರಿ ಇ-ಕ್ಲಬ್ ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲಾ ಹೋಂಗಾರ್ಡ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರವಾರದ ಹೋಂಗಾರ್ಡಗಳಿಗೆ ರೋ.ಡಾ.ಪ್ರಕಾಶ ಫಡ್ನಿಸ್ ಹೃದಯ ಸ್ತಂಭನ ಮುಂತಾದ ತುರ್ತು ವೈದ್ಯಕೀಯ ಸಂದರ್ಭದಲ್ಲಿ ಹೇಗೆ ನೆರವಾಗಬಹುದು ಎಂದು ಮೆನ್ ನೇಕ್ವಿನ್ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.
ಹೃದಯ ಕಾರ್ಯ ನಿಲ್ಲಿಸಿದಾಗ ಸಿ.ಪಿ.ಆರ್. ಪ್ರಕ್ರಿಯೆ ಮಾಡಿ ಮೆದುಳಿಗೆ ರಕ್ತ ಸಂಚಾರ ಆಗುವಂತೆ ಹೇಗೆ ನೋಡಿಕೊಳ್ಳಬೇಕು ಎಂದು ವಿಡಿಯೋ ಮೂಲಕ ತೋರಿಸಿಕೊಟ್ಟರು. ರೋಟರಿ ಇ-ಕ್ಲಬ್ ಬೆಳಗಾವಿಯ ಸದಸ್ಯ ರೋ.ಅನಂತ ನಾಡಗೌಡ, ರೋ. ಪ್ರಮೋದ ಹನುಮ ಗೊಂಡರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಉತ್ತರಕನ್ನಡ ಜಿಲ್ಲಾ ಹೋಂಗಾರ್ಡ್ ಕಮಾಂಡೆಂಟ್ ಡಾ. ಸಂಜು ನಾಯಕ, ಹೋಮಗಾರ್ಡಗಳಿಗೆ ಈ ಕಾರ್ಯಾಗಾರವನ್ನು ನಡೆಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಸುಮಾರು 50 ಜನ ಗೃಹರಕ್ಷಕರು ಈ ತರಬೇತಿಯ ಪ್ರಯೋಜನ ಪಡೆದರು. ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ರೋ.ಡಾ.ಸಮೀರ ಕುಮಾರ ನಾಯಕ ಮತ್ತು ಕಾರವಾರ ಘಟಕಾಧಿಕಾರಿ ಎಸ್. ಕೆ. ನಾಯ್ಕ್ ಉಪಸ್ಥಿತರಿದ್ದರು .ಪ್ರಥಮ ದರ್ಜೆ ಸಹಾಯಕರಾದ ಶ್ರೀನಿವಾಸ್ ನಾಯ್ಕ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.