Slide
Slide
Slide
previous arrow
next arrow

ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಅಮೃತ 2.0 ಯೋಜನೆಯಡಿ ಮಂಜೂರಾತಿ: ಆರ್‌ವಿ‌ಡಿ

300x250 AD

ಹಳಿಯಾಳ: ಪಟ್ಟಣದ ಜನಸಂಖ್ಯೆಯ ಬೆಳವಣಿಗೆಯಿಂದ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು, ಅದನ್ನು ಬಗೆಹರಿಸಲು ನೀರು ಸರಬರಾಜು ಯೋಜನೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಆಶಯದೊಂದಿಗೆ ಅಮೃತ 2.0 ಯೋಜನೆಯಡಿ ಮಂಜೂರಾತಿ ದೊರೆಕಿದೆ ಎಂದು ಶಾಸಕರಾದ ಆರ್.ವಿ. ದೇಶಪಾಂಡೆಯವರು ಮಾಧ್ಯಮಕ್ಕೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಅವರು‌ ನೀಡಿದ ಪ್ರಕಟಣೆಯಲ್ಲಿ ದಾಂಡೇಲಿಯ ಜಾಕ್ವೆಲ್ನಿಂದ ಪ್ರಾರಂಭಗೊಂಡು ಕರ್ಕಾದ ಕುಡಿಯುವ ನೀರು ಶುದ್ಧಿಕರಣ ಘಟಕದಿಂದ ಹಳಿಯಾಳ ಪಟ್ಟಣದ ಮರಡಿಗುಡ್ಡದ ನೀರು ಶೇಖರಣಾ ಟ್ಯಾಂಕ್ ವರೆಗೆ ಹೊಸ ಪೈಪ್ ಲೈನ್ ಅಳವಡಿಕೆಯ 59.31 ಕೋಟಿ ರೂ ವೆಚ್ಚದ ಕಾಮಗಾರಿಯನ್ನು ಕೈಗೊಳ್ಳುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top