ಭಟ್ಕಳ: ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಎಐಟಿಎಂ)ನಲ್ಲಿ ನಡೆದ ‘ಎಸ್‌ಟಿಇಎಂ 23’ ಮೆಗಾ ಫೆಸ್ಟ್‌ನಲ್ಲಿ 17 ಕಾಲೇಜಿನ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಅಂಜುಮನ್‌ನ ಉಪಾಧ್ಯಕ್ಷ ಸೈಯದ್ ಸಮೀರ್ ಸಕ್ಕಾಫ್ ಎಸ್‌ಎಂ ಮಾತನಾಡಿ, ಇಂದಿನ ಜಗತ್ತಿನಲ್ಲಿ ಕಂಪನಿಗಳು ಮತ್ತು ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಅಗತ್ಯ ಕೌಶಲ್ಯಗಳನ್ನು ಪಡೆದುಕೊಳ್ಳುವ ಮೂಲಕ ಭವಿಷ್ಯದ ಉದ್ಯೋಗಕ್ಕೆ ಸಿದ್ದರಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಎಐಟಿಎಂ) ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್ ವಹಿಸಿದ್ದರು.
ಈ ಸಂದರ್ಭದಲ್ಲಿ ಅಂಜುಮನ್ ಕಾರ್ಯಕಾರಿಣಿ ಸದಸ್ಯ ಯಾಸೀನ್ ಅಸ್ಕೇರಿ, ಪ್ರಾಚಾರ್ಯ ಡಾ.ಕೆ.ಫಜಲುರ್ ರಹಮಾನ್, ಕುಲಸಚಿವ ಪ್ರೊ.ಜಾಹಿದ್ ಹಸನ್ ಖರೂರಿ, ಫೆಸ್ಟ್ ಸಂಚಾಲಕ ಡಾ.ಅನಂತಮೂರ್ತಿ ಶಾಸ್ತ್ರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.