Slide
Slide
Slide
previous arrow
next arrow

ಭರದಿಂದ ಸಾಗಿದ ರಸ್ತೆ ಡಾಂಬರೀಕರಣ: ಜನತೆಯ ಬೇಡಿಕೆಗೆ ಆರ್.ವಿ.ಡಿ. ಸ್ಪಂದನೆ

300x250 AD

ದಾಂಡೇಲಿ : ಕಳೆದ ಆರೇಳು ತಿಂಗಳಿನಿಂದ ದಾಂಡೇಲಿ – ಹಳಿಯಾಳ ಹೆದ್ದಾರಿಯಲ್ಲಿ ಬರುವ ಕರ್ಕಾದಿಂದ ಹಾಲಮಡ್ಡಿಯವರೆಗೆ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಹೊಂಡ – ಗುಂಡಿಗಳಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದ್ದು, ರಸ್ತೆ ದುರಸ್ತಿಗಾಗಿ ಹಾಗೂ ಡಾಂಬರೀಕರಣಕ್ಕಾಗಿ ಶಾಸಕ ಆರ್.ವಿ.ದೇಶಪಾಂಡೆಯವರಿಗೆ ಮನವಿ ಮಾಡಲಾಗಿತ್ತು.

ಜನತೆಯ ಮನವಿಗೆ ಸ್ಪಂದಿಸಿದ ಆರ್.ವಿ.ದೇಶಪಾಂಡೆ ಕರ್ಕಾದಿಂದ ಹಾಲಮಡ್ಡಿಯವರಿಗೆ ರಸ್ತೆ ದುರಸ್ತಿ ಮತ್ತು ಡಾಂಬರೀಕರಣಕ್ಕೆ ಅನುದಾನವನ್ನು ಮಂಜೂರು ಮಾಡಿಸಿ ಲೋಕೊಪಯೋಗಿ ಇಲಾಖೆಯ ಮೂಲಕ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಿದ್ದಾರೆ. ಕಳೆದ ಏಳೆಂಟು ದಿನಗಳಿಂದ ಪ್ರಥಮವಾಗಿ ರಸ್ತೆಯಲ್ಲಿದ್ದ ಹೊಂಡ – ಗುಂಡಿಗಳನ್ನು ಮುಚ್ಚಿ ಆನಂತರ ಡಾಂಬರೀಕರಣ ಹಾಕುವ ಕಾಮಗಾರಿಯನ್ನು ನಡೆಸಲಾಗಿದೆ. ಒಂದನೇ ಹಂತದ ಡಾಂಬರೀಕರಣ ಕಾರ್ಯ ಮುಗಿಸಿ ಎರಡನೇ ಹಂತದ ಡಾಂಬರೀಕರಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಒಟ್ಟಿನಲ್ಲಿ ಭಾನುವಾರವು ರಸ್ತೆ ದುರಸ್ತಿ ಕಾಮಗಾರಿ ಭರದಿಂದ ಸಾಗುತ್ತಿದೆ.

300x250 AD

Share This
300x250 AD
300x250 AD
300x250 AD
Back to top