ಹೊನ್ನಾವರ: ಇಂದಿನ ದಿನ ಸ್ಪರ್ಧಾತ್ಮಕ ದಿನವಾಗಿದೆ. ವಿದ್ಯಾರ್ಥಿಗಳು ವ್ಯಾವಹಾರಿಕ ಜ್ಞಾನವನ್ನು ಹೊಂದಿರಬೇಕು. ಮಾತಿನಲ್ಲಿ ಹಾಗೂ ವ್ಯವಹಾರದಲ್ಲಿ ಚಾಕಚಕ್ಯತೆಯಿಂದ ಇರಬೇಕು ಎಂದು ಎಂ. ಎಸ್. ಹೆಗಡೆ ಗುಣವಂತೆಯವರು ಹೇಳಿದರು.
ಅವರು ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ಶಾಲೆಯಲ್ಲಿ ಸಂತೆ”ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ಮಾತನಾಡಿ, ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಪಾಲಕರು ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿಸಿದರು. ಶಿಕ್ಷಕ ಹರೀಶ ಸಂಕೋಳ್ಳಿಯವರು ಸ್ವಾಗತಿಸಿದರು.ಶಿಕ್ಷಕಿ ಕೀರ್ತಿ ನಾಯ್ಕ ವಂದಿಸಿದರು.ಅಶ್ವಿನಿ ಮೇಸ್ತ ನಿರೂಪಿಸಿದರು. ಪಾಲಕರು ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಲವಲವಿಕೆಯಿಂದ ಪಾಲ್ಗೊಂಡಿದ್ದರು.