ದಾಂಡೇಲಿ: ನಗರ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯಿಂದ ಈಗಾಗಲೇ ಒಳಚರಂಡಿ ಯೋಜನೆಯು ಕಾರ್ಯಗತವಾಗಿದ್ದು ಮನೆಗಳು, ಅಪಾರ್ಟ್ಮೆಂಟ್, ಫ್ಲಾಟ್, ಶೈಕ್ಷಣಿಕ ಸಂಸ್ಥೆ ಆಸ್ಪತ್ರೆ ಸರಕಾರಿ ಕಚೇರಿಗಳು ಹಾಗೂ ಇತರೆ ಕಟ್ಟಡಗಳಿಗೆ ಒಳಚರಂಡಿ ಜೋಡಣೆಯನ್ನು ಮಾಡುವುದು ಅವಶ್ಯವಿರುತ್ತದೆ. ಈ ನಿಟ್ಟಿನಲ್ಲಿ ನಗರಸಭೆಯ ಕಚೇರಿಯಲ್ಲಿ ಅರ್ಜಿ ನಮೂನೆಗಳು ಲಭ್ಯವಿದ್ದು, ಸದರಿ ಅರ್ಜಿ ನಮೂನೆಗಳನ್ನು ಪಡೆದು ನಗರಸಭೆ ನಿಗದಿಪಡಿಸಿರುವ ಶುಲ್ಕವನ್ನು ಭರಿಸಿ ಒಳಚರಂಡಿ ಜೋಡಣೆಯನ್ನು ಪಡೆಯುವಂತೆ ದಾಂಡೇಲಿ ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಈ ಬಗ್ಗೆ ಇಂದು ಗುರುವಾರ ಅವರು ನಗರಸಭೆಯಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಗರಸಭೆಯ ಆರೋಗ್ಯ ವಿಭಾಗದ ಶುಭಂ ರಾಯ್ಕರ್ ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದೆಂದು ತಿಳಿಸಿದ್ದಾರೆ.