ಶಿರಸಿ: ಇಲ್ಲಿನ ಲಯನ್ಸ್ ಕ್ಲಬ್, ಲಯನ್ಸ್ ಎಜ್ಯುಕೇಶನ್ ಸೊಸೈಟಿ ಆಶ್ರಯದಲ್ಲಿ ವಾರ್ಷಿಕ ದತ್ತಿನಿಧಿ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಯಕ್ಷಗಾನ ಪ್ರದರ್ಶನವನ್ನು ಡಿ.28, 29 ಹಾಗೂ 30 ರಂದು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಲ.ಪ್ರಭಾಕರ ಹೆಗಡೆ ತಿಳಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಡಿ.28 ರಂದು ಬೆಳಿಗ್ಗೆ 10 ಘಂಟೆಗೆ ಲಯನ್ಸ್ ಸಭಾಭವನದಲ್ಲಿ ವಾರ್ಷಿಕ ದತ್ತಿನಿಧಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಸಮಾಜ ಸೇವಕ ಅನಂತಮೂರ್ತಿ ಹೆಗಡೆ ಆಗಮಿಸಲಿದ್ದಾರೆ. ಡಾ.ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿಯು ಕಾಲೇಜು ಸಹಾಯಾರ್ಥ ಹಿಲ್ಲೂರು ಯಕ್ಷಮಿತ್ರ ಬಳಗದಿಂದ ಡಿ.29 ರಂದು ಸಂಜೆ 6 ಘಂಟೆಗೆ ಲಯನ್ಸ್ ಶಾಲಾ ಆವರಣದಲ್ಲಿ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಡಿ.29 ರಂದು ಸಂಜೆ 6 ರಿಂದ 10 ಘಂಟೆಯವರೆಗೆ ಕವಿ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರ, ಮೃದಂಗದಲ್ಲಿ ಅನಿರುದ್ಧ ಹೆಗಡೆ ವರ್ಗಾಸರ, ಚಂಡೆಯಲ್ಲಿ ಪ್ರಸನ್ನ ಭಟ್ಟ ಹೆಗ್ಗಾರ ಕಾರ್ಯನಿರ್ವಹಿಸಲಿದ್ದಾರೆ. ಮುಮ್ಮೇಳದಲ್ಲಿ ಕೃಷ್ಣಯಾಜಿ ಬಳ್ಕೂರು, ಗಣಪತಿ ನಾಯ್ಕ ಕುಮಟಾ, ಉದಯ ಹೆಗಡೆ ಕಡಬಾಳ, ನಾಗೇಂದ್ರ ಭಟ್ಟ ಮೂರೂರು, ಶ್ರೀಧರ ಹೆಗಡೆ ಚಪ್ಪರಮನೆ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ದೀಪಕ ಭಟ್ಟ ಕುಂಕಿ ಕಾಣಿಸಿಕೊಳ್ಳಲಿದ್ದಾರೆ ಎಂದರು.
ಲಯನ್ಸ್ ಶಾಲಾ ಆವರಣದಲ್ಲಿ ಡಿ.30 ರಂದು ಸಂಜೆ 5 ಘಂಟೆಗೆ ಲಯನ್ಸ್ ಶಾಲಾ ವಾರ್ಷಿಕೋತ್ಸವ ಜರುಗಲಿದ್ದು, ಮುಖ್ಯ ಅತಿಥಿಯಾಗಿ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಭಾಗವಹಿಸಲಿದ್ದಾರೆ. ಲಯನ್ಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಲ.ಪ್ರಭಾಕರ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಧ್ಯಕ್ಷ ಲ.ಕೆ.ಬಿ.ಲೋಕೇಶ ಹೆಗಡೆ, ಗೌರವ ಕಾರ್ಯದರ್ಶಿ ಲ.ಪ್ರೋ.ರವಿ ನಾಯಕ, ಕೋಶಾಧ್ಯಕ್ಷ ಲ.ಉದಯ ಸ್ವಾದಿ, ಸಹ ಕಾರ್ಯದರ್ಶಿ ಲ.ವಿನಯ ಹೆಗಡೆ, ಸದಸ್ಯರಾದ ತ್ರಿವಿಕ್ರಮ ಪಟವರ್ಧನ, ಶ್ಯಾಮಸುಂದರ ಭಟ್ಟ, ಶ್ರೀಕಾಂತ್ ಹೆಗಡೆ, ಚಂದ್ರಶೇಖರ ಹೆಗಡೆ, ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ ಹೆಗಡೆ, ಕಾರ್ಯದರ್ಶಿ ಜ್ಯೋತಿ ಹೆಗಡೆ ಪಾಲ್ಗೊಳ್ಳಲಿದ್ದಾರೆ ಎಂದರು.
ಗೌರವ ಕಾರ್ಯದರ್ಶಿ ಲಾ.ರವಿ ನಾಯಕ ಮಾತನಾಡಿ, ಲಯನ್ಸ್ ಅಕಾಡೆಮಿ ಮೂಲಕ ಕಾಲೇಜು ಆರಂಭದ ಜತೆ ಬೆಂಗಳೂರಿನ ಬೇಸ್ ಕಂಪೆನಿ ಜತೆ ಒಡಂಬಡಿಕೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಇಟಿ, ನೀಟ್ ಮತ್ತು ಜೆಇ ತರಬೇತಿ ನೀಡಲಾಗುತ್ತಿದೆ. ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ನಮ್ಮೆಲ್ಲರ ಧೋರಣೆಯಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಕೆ.ಬಿ.ಲೋಕೇಶ ಹೆಗಡೆ, ಸಹ ಕಾರ್ಯದರ್ಶಿ ವಿನಯ ಹೆಗಡೆ, ಸದಸ್ಯ ಶ್ಯಾಮಸುಂದರ ಭಟ್ಟ ಇದ್ದರು.