ಶಿರಸಿ: ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023- 24 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಎಂ. ಜೆ. ಎಫ್.ಲಯನ್ ಪ್ರಭಾಕರ್ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಶಾಲೆಯ ಹಿರಿಯ ವಿದ್ಯಾರ್ಥಿ, ಯುವ ಅಥ್ಲೆಟಿಕ್ ಆಟಗಾರ,ಬೆಂಗಳೂರಿನಲ್ಲಿ ನಡೆದ ಶಿಕ್ಷಣ ಇಲಾಖೆಯ ಪದವಿ ಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಹ್ಯಾಮರನ್ನು 66.95 ಮೀಟರ್ ದೂರ ಎಸೆದು ನೂತನ ರಾಜ್ಯ ದಾಖಲೆಯನ್ನು ಸ್ಥಾಪಿಸಿ ಬಂಗಾರದ ಪದಕವನ್ನು ಪಡೆದಿರುವ ಕುಮಾರ್ ಯಶಸ್ ಪ್ರವೀಣ್ ಕುರುಬರ್ ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಎಂ ಜೆ ಎಫ್ ಲಯನ್ ಕೆ.ಬಿ. ಲೋಕೇಶ್ ಹೆಗಡೆ ಕ್ರೀಡೆಯು ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಕ್ರೀಡೆ ಅತ್ಯಗತ್ಯ ಎಂದು ನುಡಿದರು. ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೊಫೆಸರ್ ರವಿ ನಾಯಕ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ಸಹ ಕಾರ್ಯದರ್ಶಿಗಳಾದ ಲ.ವಿನಯ್ ಹೆಗಡೆ, .ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ಸದಸ್ಯರಾದ ಲ.ಶ್ಯಾಮಸುಂದರ್ ಭಟ್, ಲಯನ್ಸ್ ಕ್ಲಬ್ ಶಿರಸಿಯ ಪ್ರಸ್ತುತ ಸಾಲಿನ ಕಾರ್ಯದರ್ಶಿಗಳಾದ ಲಯನ್ ಜ್ಯೋತಿ ಅಶ್ವತ್ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಿಕೊಟ್ಟರು. ಲಯನ್ಸ್ ಶಾಲಾ ಕಾಲೇಜು ಸಮೂಹಗಳ ಪ್ರಾಂಶುಪಾಲರಾದ ಶಶಾಂಕ್ ಹೆಗಡೆ ಸ್ವಾಗತ ಕೋರಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ವಿದ್ಯಾರ್ಥಿಗಳ ಶಿಸ್ತುಬದ್ಧಿನ ಪಥ ಸಂಚಲನ, ಕ್ರೀಡೆಯ ಮನೋಭಾವನೆಯನ್ನು ಎತ್ತಿ ತೋರುವಂತಹ ನೃತ್ಯ ಪ್ರದರ್ಶನ, ಪ್ರಾರ್ಥನಾ ಗೀತೆ, ಅತಿಥಿಯಾಗಿ ಆಗಮಿಸಿದ ಶಾಲೆಯ ಹಿರಿಯ ವಿದ್ಯಾರ್ಥಿ ಯಶಸ್ ಕುರುಬರ್ ಇವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ, ಎಲ್ಲಾ ಕ್ರೀಡೆಯಲ್ಲೂ ಅತ್ಯುತ್ಸಾಹದಿಂದ ಪಾಲ್ಗೊಂಡು ಗೆಲುವನ್ನು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮಗಳೆಲ್ಲವನ್ನೂ ದೈಹಿಕ ಶಿಕ್ಷಕರಾದ ನಾಗರಾಜ್ ಜೋಗ್ಳೆಕರ್ ಮತ್ತು ಶ್ರೀಮತಿ ಚೇತನಾ ಪಾವಸ್ಕರ್, ಶ್ರೀಮತಿ ಅನಿತಾ ಭಟ್ ಶ್ರೀಮತಿ ರೇಷ್ಮಾ ಮಿರಾಂಡಾ, ಶ್ರೀಮತಿ ಗೀತಾ ನಾಯ್ಕ ಅವರ ಮುಂದಾಳತ್ವದಲ್ಲಿ ಇತರ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳ, ವಿದ್ಯಾರ್ಥಿ ಪ್ರತಿನಿಧಿಗಳ ಸಹಾಯದೊಂದಿಗೆ ಅಚ್ಚುಕಟ್ಟಾಗಿ ನೆರವೇರಿಸಲಾಯಿತು, ಶ್ರೀಮತಿ ಮುಕ್ತಾ ನಾಯ್ಕ ವಂದನಾರ್ಪಣೆಯನ್ನು ನಡೆಸಿಕೊಟ್ಟರು. ಶ್ರೀಮತಿ ಚೇತನಾ ಹೆಗಡೆ ಮತ್ತು ಶ್ರೀಮತಿ ಸಂಧ್ಯಾ ಭಟ್ ಕಾರ್ಯಕ್ರಮ ನಿರೂಪಿಸಿದರು.