ಯಲ್ಲಾಪುರ: ಪಟ್ಟಣದ ನಾಯಕನಕೆರೆ ದತ್ತ ಮಂದಿರದಲ್ಲಿ ಶ್ರೀರಾಮಚಂದ್ರಾಪುರ
ಮಠದ ಆಡಳಿತಕ್ಕೆ ಒಳಪಟ್ಟ ನಂತರ 16ನೇಯ ದತ್ತ ಜಯಂತಿ ಉತ್ಸವ
ಡಿ.26 ರಂದು ನಡೆಯಲಿದೆ ಎಂದು ರಾಮಚಂದ್ರಾಪುರ ಮಠದ ಉಸ್ತುವಾರಿ ಎಸ್ ವಿ ಯಾಜಿ ಹೇಳಿದರು.
ಅವರು ಶನಿವಾರ ಆಮಂತ್ರಣ ಬಿಡುಗಡೆ ಮಾಡಿ ಮಾಹಿತಿ ನೀಡುತ್ತಾ ಮಾತನಾಡಿ, ಅಂದು ದತ್ತಾತ್ರಯ ಮೂಲ ಮಂತ್ರ ಹವನ ನಡೆಯಲಿದೆ. ದತ್ತಾತ್ರೇಯ ದೇವಾಲಯದ ಆವಾರದಲ್ಲಿ ಶಿಲಾಮಯ ದತ್ತ ಮಂದಿರ ನಿರ್ಮಾಣಕ್ಕೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಭೂಮಿಪೂಜೆ ನೆರವೇರಿಸಲಿದ್ದಾರೆ. ಡಿ.20 ರಿಂದ 26 ರವರೆಗೆ ಗುರುಚರಿತ್ರೆ ಪಾರಾಯಣ ನಡೆಯಲಿದೆ. ಪ್ರತಿ ದಿವಸ ಭಜನಾ ಕಾರ್ಯಕ್ರಮ ನಡೆಯಲಿದೆ. ಡಿ.26 ರಂದು ವೃತ, ತೊಟ್ಟಿಲ ಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಪಲ್ಲಕ್ಕಿ ಉತ್ಸವ, ವಾಣಿ ಹೆಗಡೆ ಅವರಿಂದ ಸಂಗೀತ ಕಾರ್ಯಕ್ರಮ
ನಡೆಯಲಿದೆ ಎಂದರು.
ದತ್ತ ಜೋಳಿಗೆ ಕಾರ್ಯಕ್ರಮ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ದೇವಸ್ಥಾನದ ಅಭಿವೃದ್ಧಿಗೆ ಭಕ್ತರು ನೀಡುವ ಕೊಡುಗೆಯನ್ನು ಸಂಗ್ರಹಿಸಲಾಗುತ್ತದೆ. ಈ ವೇಳೆ ದೇವಸ್ಥಾನದ ಪ್ರಮುಖರಾದ ಪ್ರಸಾದ ಹೆಗಡೆ, ಶಾಂತಾರಾಮ ಹೆಗಡೆ, ಸುಧೀರ ಪೈ, ರಮೇಶ ಹೆಗಡೆ, ಶ್ರೀರಂಗ ಕಟ್ಟಿ, ಬಾಬು ಬಾಂದೇಕರ, ನಾಗರಾಜ, ನಾಗೇಶ್ ಯಲ್ಲಾಪುರಕರ್, ಅನಂತ ಬಾಂದೇಕರ್ ಇದ್ದರು.