Slide
Slide
Slide
previous arrow
next arrow

ಎಂಎಂ ಮಹಾವಿದ್ಯಾಲಯದಲ್ಲಿ ‘ಬಾಂಗ್ಲಾ ವಿಮೋಚನಾ ಸಂಭ್ರಮ ಉಪನ್ಯಾಸ’

300x250 AD

ಶಿರಸಿ: ಇವತ್ತಿನ ಯುವಕರೇ ನಾಳೆಗೆ ಬಲಿಷ್ಠ ರಾಷ್ಟ್ರವನ್ನು ಕಟ್ಟುವವರು. ಹಾಗಾಗಿ ಯುವಜನತೆಯು ತಮ್ಮ ದಿನ ನಿತ್ಯದ ಜೀವನದಲ್ಲಿ ಶಿಸ್ತು ಸಂಯಮವನ್ನು ರೂಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ನಿವೃತ್ತ  ಸೇನಾ ಸುಬೇದಾರ್ ರಾಮು  ಹೇಳಿದರು.

ಅವರು ಎಂಇಎಸ್‌ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಕಾಲೇಜಿನ ಎನ್ ಸಿ ಸಿ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬಾಂಗ್ಲಾ ವಿಮೋಚನಾ ಸಂಭ್ರಮ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಇವತ್ತು ಬಹಳಷ್ಟು ಜನ ಸೇನೆಗೆ ಸೇರಲು ಹೆದರುತ್ತಾರೆ. ಮನೆಯವರು ಮಕ್ಕಳನ್ನು ಸೇನೆಗೆ ಸೇರಲು ಪ್ರೋತ್ಸಾಹಿಸುವುದನ್ನು ಬಿಟ್ಟು ಸೇನೆಗೆ  ಸೇರದಿರಲು ಒತ್ತಾಯಿಸುತ್ತಾರೆ. ಆದರೆ ಹಾಗಾಗಬಾರದು ಇಂದು ಭೂಸೇನೆ ವಾಯು ಸೇನೆ, ನೌಕಾ ಸೇನೆ ಹೀಗೆ ಮೂರು ರಕ್ಷಣಾ ವ್ಯವಸ್ಥೆಯಲ್ಲಿ ಉತ್ತಮ ಉದ್ಯೋಗದ ಆಯ್ಕೆ ಅವಕಾಶ ನಮಗೆ ಇದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ವಾಯು ಸೇನೆಯ ನಿವೃತ್ತ ಸೇನಾಧಿಕಾರಿ ಎಸ್.ಜಿ. ಭಟ್  ಮಾತನಾಡಿ ದೇಶದ ಸಾಮಾನ್ಯ ನಾಗರಿಕರ ಹಾಗೆ ಒಬ್ಬ ಸೈನಿಕರ ಜೀವನ ಸುಲಭವಲ್ಲ. ಸೇನೆಗೆ ಸೇರಿದ ಮಾತ್ರಕ್ಕೆ ಯುದ್ಧಗಳನ್ನು ಎದುರಿಸದೆ ಇರುವ ಪರಿಸ್ಥಿತಿಯೂ ಕೂಡ ಬರಬಹುದು. ಆದರೆ ಒಬ್ಬ ಸೈನಿಕನಾದವನು ಯುದ್ಧಕ್ಕೆ ಪ್ರತಿ ಕ್ಷಣವೂ ಕೂಡ ಸಿದ್ದನಾಗಿ ಇರಬೇಕು. ಇವತ್ತು ನಮ್ಮ ಭಾರತ ಸರ್ಕಾರ ಯುವ ಜನತೆಗೆ ಸೇನೆಯಲ್ಲಿ ಸೇರಲು ಅನೇಕ ಅವಕಾಶಗಳನ್ನು ನೀಡಿದೆ. ಇವುಗಳನ್ನು ಯುವ ಜನತೆಗಳಾದ ನೀವು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಎನ್ ಸಿ ಸಿ ಹಾಗೂ ಭಾರತೀಯ ಸೇನೆ ಇವು ನಮ್ಮಲ್ಲಿ ಶಿಸ್ತು ಸಂಯತೆಯನ್ನು ರೂಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನುಡಿದರು.

300x250 AD

ಕಾಲೇಜಿನ  ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ  ಮಾತನಾಡಿ ಭಾರತ ಒಂದು ಶಾಂತಿ ಪ್ರಿಯ ರಾಷ್ಟ್ರ. ನಾವಾಗೆ ಯಾವ ರಾಷ್ಟ್ರದ ಮೇಲೂ ಕೂಡ ಯುದ್ಧವನ್ನು ಮಾಡಿಲ್ಲ. ಆದರೆ ಅನ್ಯ ರಾಷ್ಟ್ರದವರು ನಮ್ಮ ಮೇಲೆ ದಾಳಿ ಮಾಡಿದಾಗ ಅವರನ್ನು ಬಿಡುವ ಜಾಯಮಾನ ನಮ್ಮದಲ್ಲ. ನಾವು ಇವತ್ತು ಐಶ್ವರ್ಯದ ಜೀವನವನ್ನು ನುಡಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಸೈನಿಕರು. ಇಲ್ಲಿ ನೂರು ರೂಪಾಯಿಗೆ ಸಿಗುವ ಪೆಟ್ರೋಲ್ ನೆರೆಯ ರಾಷ್ಟ್ರದಲ್ಲಿ 400 ರಿಂದ 500 ರೂಪಾಯಿ ಇದೆ, ಹಾಗೆ ಇವತ್ತು ನಮ್ಮ ದೇಶದ ರಾಷ್ಟ್ರಪತಿಯಿಂದ ಹಿಡಿದು ಭೂಸೇನೆ ನೌಕಾ ಸೇನೆ ವಾಯುಸೇನೆ ಹೀಗೆ ಎಲ್ಲಾ ವಿಭಾಗದಲ್ಲೂ ಕೂಡ ಮಹಿಳೆಯರು ಕೂಡ ತಮ್ಮ ಚಾಪನ್ನು ಮೂಡಿಸಿರುವುದನ್ನು ಕಾಣಬಹುದು  ಎಂದು ಹೇಳಿದರು.

ಎನ್ ಸಿ ಸಿ ಅಧಿಕಾರಿ ಅಶ್ವತ್ ಹೆಗಡೆ ಹಾಗೂ ನಿವೃತ್ತ ಪ್ರೊಫೆಸರ್ ನರಸಿಂಹ ಮೂರ್ತಿ ಉಪಸ್ಥಿತರಿದ್ದರು. ಸುಮಂತ್ ಸ್ವಾಗತಿಸಿದರು. ಲಿಕಿತ್ ನಿರೂಪಿಸಿ ವಂದಿಸಿದರು.

Share This
300x250 AD
300x250 AD
300x250 AD
Back to top