ಶಿರಸಿ: ಕೋಟೆಗಲ್ಲಿಯ ಸೌದಾಗರ ಒಣಿಯಲ್ಲಿ ಆಯಿಲ್ ಮಿಶ್ರಿತ ಬಾವಿ ನೀರನ್ನು ಸ್ವಚ್ಚಗೊಳಿಸುತ್ತಿದ್ದ ಸಂದರ್ಭದಲ್ಲಿ ಬಾವಿಯೊಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಮೂವರು ಕಾರ್ಮಿಕರಿಗೆ ಗಾಯಗಳಾದ ಘಟನೆ ಗುರುವಾರ ನಡೆದಿದೆ.
ಗುರುವಾರ ಬೆಳಿಗ್ಗೆ ಮಹಿಳೆಯರು ನೀರು ಸೇದುವ ಸಮಯದಲ್ಲಿ ಪೆಟ್ರೋಲ್ ವಾಸನೆ ಬಂದಿದ್ದು, ತಕ್ಷಣ ಪೋಲಿಸರಿಗೆ ಹಾಗೂ ನಗರಸಭೆಗೆ ಸಾರ್ವಜನಿಕರು ವಿಷಯ ತಿಳಿಸಿದ್ದು, ಬಾವಿಯ ನೀರು ಬಳಸದಂತೆ ಆದೇಶ ಹೊರಡಿಸಲಾಗಿತ್ತು. ನಂತರ ಬಾವಿಯನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಬಾವಿಯಿಂದ ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದ ಕಾರ್ಮಿಕರಾದ ರವಿ, ವಿನಾಯಕ ಹಾಗು ಜಗದೀಶ ಎಂಬುವವರಿಗೆ ಗಾಯಗಳಾಗಿವೆ. ವಿನಾಯಕ್ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಘಟನೆಗೆ ಸಂಬಂಧಿಸಿ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.