ಅಂಕೋಲಾ: ತಾಲೂಕಿನ ಭಾವಿಕೇರಿ ಗ್ರಾಪಂ ವ್ಯಾಪ್ತಿಯ ಗಾಂವಕರ ಕೇರಿ, ಕೋಮಾರಪಂತವಾಡಾದ ಬಸ್ ನಿಲ್ದಾಣದ ಸಮೀಪದ ಮರ ಒಂದಕ್ಕೆ ಬೃಹದಾಕಾರದ ಜೇನುಗೂಡು ಕಟ್ಟಿ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗಿತ್ತು.
ಇದು ಹೀಗೆಯೇ ದೊಡ್ಡದಾಗುತ್ತ ಹೋದರೆ ಮುಂದೆ ಶಾಲಾ ವಿದ್ಯಾರ್ಥಿಗಳು ಸುತ್ತ ಮುತ್ತಲಿನ ಸ್ಥಳೀಯರಿಗೆ ತೊಂದರೆಯಾಗಬಹುದು ಎಂದು ಸ್ಥಳೀಯರು ಈ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ವಲಯ ಅರಣ್ಯಾಧಿಕಾರಿ ಜಿ ವಿ ನಾಯಕ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರಮೋದ ಪಟಗಾರ ಗಸ್ತು ವನಪಾಲಕರಾದ ಲಿಂಗಣ್ಣ, ಗೋಪಾಲ ಗೌಡ, ಪ್ರಕಾಶ ಹಾರವಾಡೇಕರ ಮತ್ತಿತರರು ರಾತ್ರಿ 10 ಗಂಟೆಯಿಂದ ಮುಂಜಾನೆ1 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗಾಗುವ ತೊಂದರೆ ತಪ್ಪಿಸಿದ್ದಾರೆ. ಇಲ್ಲಿಯ ಸ್ಥಳೀಯರು ಅರಣ್ಯ ಇಲಾಖೆಯ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ