ಭಟ್ಕಳ: ಸುಮಾರು 36 ಅಡಿ ಆಳದ ಬಾವಿಯಲ್ಲಿ ಬಿದ್ದ ಹೊರಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳ ರಕ್ಷಣೆ ಮಾಡಿದ ಘಟನೆ ತಾಲೂಕಿನ ಹೆಬಳೆ ಗಿರಿನಹಿತ್ಲುವಿನಲ್ಲಿ ನಡೆದಿದೆ.
ಹೋರಿಯು ಮೇವು ತಿನ್ನಲು ಹೋದ ವೇಳೆಯಲ್ಲಿ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿದೆ. ಅದನ್ನು ಗಮನಿಸಿದ ಸ್ಥಳೀಯ ನಿವಾಸಿ ಕನ್ನಯ್ಯ ನಾರಾಯಣ ದೇವಾಡಿಗ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಾವಿಯಲ್ಲಿರುವ ಹೊರಿಯನ್ನು ಹಗ್ಗ ಹಾಗೂ ಹೋರ್ಸ್ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪ್ರಭಾರಿ ಠಾಣಾಧಿಕಾರಿ ಗಜಾನನ ದೇವಾಡಿಗ, ಕುಮಾರ ನಾಯ್ಕ, ಸುಧಾಕರ ದೇವಾಡಿಗ, ನಾರಾಯಣ ಪಟಗಾರ, ಸಾಗರ ಗಂಗೋಜಿ, ಶಂಕರ ಲಮಾಣಿ ಹಾಗೂ ಸ್ಥಳೀಯರು ಇದ್ದರು.