Slide
Slide
Slide
previous arrow
next arrow

ಜನವರಿ ಮೊದಲ ವಾರದಲ್ಲಿ ಕರಾವಳಿ ಉತ್ಸವ : ಜಿಲ್ಲಾಧಿಕಾರಿ

300x250 AD

ಕಾರವಾರ: ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವಂತೆ ಅದ್ದೂರಿಯಾಗಿ ಕರಾವಳಿ ಉತ್ಸವ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರಾವಳಿ ಉತ್ಸವದ ಪೂರ್ವ ಸಿದ್ಧತಾ ಸಭೆ ನಡೆಸಿದ ಅವರು, ಜನವರಿ ತಿಂಗಳ ಮೊದಲ ವಾರ ಉತ್ಸವ ಆಯೋಜನೆ ಮಾಡಲಾಗುತ್ತದೆ. ಇದಕ್ಕಾಗಿ ಈಗಿಂದಲೇ ಸಿದ್ಧತೆಗಳನ್ನು ಆರಂಭಿಸಬೇಕು ಎಂದರು.

ಈ ಹಿಂದೆ ನಡೆದಂತೆ ವೈಭವದಿಂದ ಉತ್ಸವ ಆಚರಿಸಲಾಗುವುದು. ಜನಾಕರ್ಷಕವಾಗಿ ನಡೆಸಬೇಕಿದ್ದು ಸ್ಥಳಿಯ ಪ್ರತಿಭಾವಂತ ಕಲಾವಿದರ ಜತೆಯಲ್ಲಿ ನಾಡಿನ ಗಮನಸೆಳೆಯುವ ಕಲಾವಿದರಿಗೂ ಕಾರ್ಯಕ್ರಮದಲ್ಲಿ ಅವಕಾಶ ನೀಡಬೇಕು. ಸ್ಥಳೀಯ ಕ್ರೀಡಾಪಟುಗಳಿಗೆ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನಗಳನ್ನು ಆಯೋಜನೆಗೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

300x250 AD

ಜಿಲ್ಲಾ ಮಟ್ಟದ ಉತ್ಸವ ಆಗಿರುವುದರಿಂದ ಜಿಲ್ಲೆಯ ಎಲ್ಲ ತಾಲ್ಲೂಕಿನವರಿಗೂ ಪಾಲ್ಗೊಳ್ಳುವಿಕೆಗೆ ಅವಕಾಶ ಸಿಗಬೇಕು. ಕೇವಲ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳಷ್ಟೆ ಅಲ್ಲದೆ ಪ್ರವಾಸಿಗರನ್ನು ಆಕರ್ಷಿಸಲು ಜಲಸಾಹಸ ಕ್ರೀಡೆ, ವಿಶೇಷತೆಗಳ ಅಳವಡಿಕೆಗಳು ಇರುವಂತೆ ನೋಡಿಕೊಳ್ಳಬೇಕು ಎಂದೂ ಹೇಳಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ, ಉಪ ವಿಭಾಗಧಿಕಾರಿಗಳಾದ ಜಯಲಕ್ಷ್ಮಿ ರಾಯಕೋಡ, ಡಾ.ನಯನಾ, ಕಲ್ಯಾಣಿ ಕಾಂಬ್ಳೆ, ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಸತೀಶ್ ಪವಾರ, ಇತರರು ಇದ್ದರು.

Share This
300x250 AD
300x250 AD
300x250 AD
Back to top