ಶಿರಸಿ: ಎದುರಿಗೆ ಬಂದ ರಿಕ್ಷಾ ತಪ್ಪಿಸಲು ಹೋಗಿ ಪ್ರಯಾಣಿಕರನ್ನು ತುಂಬಿಕೊಂಡು ತೆರಳುತ್ತಿದ್ದ ಬಸ್‌ವೊಂದು ಗಟಾರಕ್ಕಿಳಿದ ದುರ್ಘಟನೆ ಹೊನ್ನಾವರದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ತಾಲೂಕಿನ ಹಿರೇಬೈಲ್‌ನಿಂದ ಹೊನ್ನಾವರಕ್ಕೆ 50 ಕ್ಕೂ ಅಧಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಎದುರಿನಿಂದ ಬಂದ ರಿಕ್ಷಾ ತಪ್ಪಿಸಲು ಹೋಗಿ ಬಸ್ ರಸ್ತೆ ಪಕ್ಕದ ಗಟಾಕ್ಕೆ ಇಳಿದಿದ್ದು, ಅದೃಷ್ಟವಶಾತ್ ಚಾಲಕನ ಚಾಕಚಕ್ಯತೆಯಿಂದ ಭಾರಿ ಅನಾಹುತ ತಪ್ಪಿದೆ. ಬಸ್‌ನಲ್ಲಿ ತೆರಳುತ್ತಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ.