ಶಿರಸಿ: ಶಿರಸಿ ಲಯನ್ಸ್ ಕ್ಲಬ್ ವತಿಯಿಂದ ನ.22 ರಂದು ಲಯನ್ ಸದಸ್ಯರಿಗಾಗಿ CLLI – ಕ್ಲಬ್ ಲೆವೆಲ್ ಟ್ರೇನಿಂಗ್ ಪ್ರೊಗ್ರಾಮ್ ಆಯೋಜಿಸಿತ್ತು. ಲಯನ್ಸ ಕ್ಲಬ್ ಅಧ್ಯಕ್ಷ ಲಯನ್ ಅಶೋಕ ಹೆಗಡೆ ಸ್ವಾಗತಿಸಿದರು. ಲಯನ್ ಜಯಅಮೋಲ್ ನಾಯ್ಕ, ಎರಡನೆ ಪ್ರಾಂತ್ಯಪಾಲ ಲಯನ್ಸ ಜಿಲ್ಲೆ 317 ಬಿ, ಲಯನ್ ನೀಲಕಂಠ ಹೆಗಡೆ, ಪೂರ್ವ ಜಿಲ್ಲಾ ಪ್ರಾಂತ್ಯಪಾಲರು, ಲಯನ್ಸ ಜಿಲ್ಲೆ 317 ಸಿ ಇವರು ಲಯನ್ ಸದಸ್ಯರಿಗೆ ತರಬೇತಿ ನೀಡಿದರು. ನಂತರ ಸದಸ್ಯರಿಗೆ CLLI ಪ್ರಮಾಣ ಪತ್ರ ನೀಡಲಾಯಿತು. ಲಯನ್ಸ ಜಿಲ್ಲೆ 317 ಬಿ ಜಂಟಿ ಲಯನ್ಸ ಜಿಲ್ಲಾ ಕಾರ್ಯದರ್ಶಿ ಲಯನ್ ಡಾ. ಕೀರ್ತಿ ನಾಯ್ಕ,ಲಯನ್ಸ್ ಶಾಲಾ ಮಕ್ಕಳಿಗೆ ಮಧುಮೇಹ ಬರದಂತೆ ತಡೆಯುವ ಆಹಾರ ಪದ್ದತಿ ಬಗ್ಗೆ ತಿಳುವಳಿಕೆ ನೀಡಿದರು. ಲಯನ್ ಕೆ. ರಾಜೇಶ ಕುಮಾರ, ಲಯನ್ಸ ಕ್ಲಬ್ ದಾಬೋಲಿಮ್ ಇವರು ಶಾಲಾ ಮಕ್ಕಳಿಗೆ – ದಿನಂಪ್ರತಿ ಮಾಡಲೇಬೇಕಾದ ದಿನಚರಿ ಹಾಗೂ ಯಶಸ್ಸಿನ ಸೂತ್ರಗಳನ್ನು ಹೇಳಿಕೊಟ್ಟರು. ಅತಿಥಿಗಳ ಸನ್ಮಾನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.