ಹೊನ್ನಾವರ: ತಾಲೂಕಿನ ಬೊಮ್ಮನಕೊಡ್ಲು ಶಾಲೆಯ ನೆಲ ಶಿಥಿಲಾವಸ್ಥೆಯಲ್ಲಿದ್ದು, ಶಿರಸಿಯ ಪ್ರಜ್ವಲ ಟ್ರಸ್ಟ್’ನಿಂದ ನೆಲಕ್ಕೆ ಹಾಕುವ ಮ್ಯಾಟನ್ನು ದೇಣಿಗೆಯಾಗಿ ನೀಡಲಾಯಿತು.
ಹಳ್ಳಿಯ ಶಾಲೆಗಳನ್ನು ಹಿರಿಯರು ತುಂಬಾ ಶ್ರಮವಹಿಸಿ ಪ್ರಾರಂಭಿಸಿದ್ದರು. ಇಂದು ನಾವು ಅದನ್ನು ಉಳಿಸಿಕೊಂಡು ಹೋಗಬೇಕು. ಇದರಲ್ಲಿ ಪಾಲಕರ ಪಾತ್ರ ತುಂಬ ಮುಖ್ಯವಾದುದು ಎಂದು ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಹೇಳಿದರು.
ಇದೇ ಸಂದರ್ಭದಲ್ಲಿ ಟ್ರಸ್ಟಿನಿಂದ ಮಕ್ಕಳಿಗೆ ಹಣ್ಣು ಹಾಗೂ ಅಲ್ಪ ಪ್ರಮಾಣದ ಧನ ಸಹಾಯ ಕೂಡ ಮಾಡಲಾಯಿತು. ಶಾಲೆಯಿಂದ ಮಕ್ಕಳಿಗೆ ಮಾಡಲ್ಪಟ್ಟ ಹಲವು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪಾಲಕರ ಪ್ರಾಯೋಜಕತ್ವದಲ್ಲಿ ಬಹುಮಾನ ವಿತರಿಸಲಾಯಿತು. ಟ್ರಸ್ಟಿನ ಸಲಹಾ ಸಮಿತಿ ಸದಸ್ಯರಾದ ಗುರುರಾಜ ಹೆಗಡೆ ಮಕ್ಕಳಿಗೆ ಬಹುಮಾನ ವಿತರಿಸಿದರು. ಶಿಕ್ಷಕರಾದ ಕೃಷ್ಣ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರೆ , ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವಿ ಹೆಗಡೆ ವಂದಿಸಿದರು. ಈ ಸಂದರ್ಭದಲ್ಲಿ ಪಾಲಕರು, ಊರ ನಾಗರಿಕರು ಉಪಸ್ಥಿತರಿದ್ದರು.