Slide
Slide
Slide
previous arrow
next arrow

ಸಾಯಿ ಸ್ವಾಸ್ಥ್ಯ ಆರೋಗ್ಯ ಕೇಂದ್ರ ಆರೋಗ್ಯದ ಜೊತೆ ವ್ಯಕ್ತಿತ್ವ ರೂಪಿಸುತ್ತಿದೆ: ಬಿ.ವೈ.ರಾಘವೇಂದ್ರ

300x250 AD

ಬನವಾಸಿ: ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲಮ್ ನ ಸಾಯಿ ಸ್ವಾಸ್ಥ್ಯ ಆರೋಗ್ಯ ಕೇಂದ್ರದ ಭೂಮಿ ಪೂಜಾ ಸಮಾರಂಭವನ್ನು ಸೋಮವಾರ ಸಮೀಪದ ಕಮರೂರು ಗ್ರಾಮದಲ್ಲಿರುವ ಶ್ರೀ ಸತ್ಯಾಸಾಯಿ ಸರ್ವನಿಕೇತನಮ್ ಆವರಣದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ನೆರವೇರಿಸಿದರು.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಮಾಜದಲ್ಲಿ ದೈಹಿಕ, ಮಾನಸಿಕ ಆರೋಗ್ಯವನ್ನು ನೀಡುತ್ತಿರುವ ಶ್ರೀ ಸತ್ಯಾಸಾಯಿ ಲೋಕಸೇವಾ ಸಂಸ್ಥೆಯ ಕೇಂದ್ರ ಈ ಭಾಗದಲ್ಲಿ ಪ್ರಾರಂಭವಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಭೂಮಿ ಹಾಗು ಕಟ್ಟಡವನ್ನು ಯಾರು ಬೇಕಾದರೂ ಕಟ್ಟಬಹುದು, ಆದರೆ ಆ ಕಟ್ಟಡದ ನೆರಳಿನಲ್ಲಿರುವ ಮಕ್ಕಳ ವ್ಯಕ್ತಿತ್ವ ಕಟ್ಟುವುದು ಕಷ್ಷದ ಕೆಲಸವಾಗಿದೆ. ಶ್ರೀ ಮಧುಸೂದನ ಗುರುಗಳ ಆಶೀರ್ವಾದದಲ್ಲಿ ಆ ಕೆಲಸ ಅಭೂತಪೂರ್ವವಾಗಿ ನಡೆಯುತ್ತಿದೆ. ಅವರ ಆದರ್ಶ ನಮ್ಮೆಲ್ಲರಲ್ಲೂ ಬರಬೇಕು. ಆಗ ಮಾತ್ರ ಭಾರತವನ್ನು ವಿಶ್ವಗುರುವಾಗಿ ಕಾಣುವುದಕ್ಕೆ ಸಾಧ್ಯವಿದೆ ಎಂದರು.

ಶ್ರೀ ಸತ್ಯಾಸಾಯಿ ಲೋಕಸೇವಾ ಗುರುಕುಲಮ್ ಪ್ರಧಾನ ಪಾಲಕರಾದ ಶಿವಪ್ರಸಾದ ಭಟ್ ಅಧ್ಯಕ್ಷತೆವಹಿಸಿ ಮಾತನಾಡಿ, ಶ್ರೀ ಸತ್ಯಾಸಾಯಿ ಲೋಕಸೇವಾ ಗುರುಕುಲಮ್ ಸಂಸ್ಥೆಯ ಸಾಯಿ ಸ್ವಾಸ್ಥ್ಯ ಆರೋಗ್ಯ ಕೇಂದ್ರದಿಂದ ಬಡ ಜನರಿಗೆ ಅನುಕೂಲವಾಗಲಿದೆ. ಮುಂದಿನ ಮಾಚ್೯ ತಿಂಗಳಿನಲ್ಲಿ ಸ್ವಾಮಿಜೀಗಳಿಂದ ಕೇಂದ್ರ ಉದ್ಘಾಟನೆಗೊಳ್ಳಲಿದೆ. ಸಂಸ್ಥೆಯ ಅನ್ನಪೂರ್ಣ ಪೌಷ್ಟಿಕ ಯೋಜನೆಯು ಈ ಕೇಂದ್ರದಲ್ಲಿ ಆರಂಭವಾಗಲಿದ್ದು ಗರ್ಭಿಣಿಯರು ಇದರ ಲಾಭ ಪಡೆಯಬಹುದಾಗಿದೆ ಎಂದರು.

300x250 AD

ಕಾರ್ಯದರ್ಶಿ ಬಿ.ಆರ್. ಧೃವ ಉಲ್ಲಾಸ್, ಬೆನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಎಸ್. ಶೀಲ್ಪಾ ವೇದಿಕೆಯಲ್ಲಿ ಇದ್ದರು. ಈ ಸಂದರ್ಭದಲ್ಲಿ 2022-23ನೇ ಸಾಲಿನ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು.

ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ, ತಾಲೂಕಾಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಹೋಬಳಿ ಅಧ್ಯಕ್ಷ ರಾಜು ಕೆಂಚಿಕೊಪ್ಪ, ಶ್ರೀನಿವಾಸ ಭಟ್, ಮಧುರ ಭಟ್, ಮಂಜಪ್ಪ, ಶ್ರೀ ಸತ್ಯಾಸಾಯಿ ಸರ್ವನಿಕೇತನಮ್ ಸಂಸ್ಥೆಯ ಆಚಾರ್ಯರು, ಗುರು ಮಾತೆಯರು, ಸಿಬ್ಬಂದಿ ವರ್ಗ, ಗ್ರಾಮಸ್ಥರು, ಸಂಸ್ಥೆಯ ವಿದ್ಯಾರ್ಥಿಗಳು ಇದ್ದರು. ಗುರುಮಾತೆ ರೇಖಾ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Share This
300x250 AD
300x250 AD
300x250 AD
Back to top