ಯಲ್ಲಾಪುರ: ಲಾರಿಯೊಂದು ಚಾಲಕ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಕಿರವತ್ತಿಯಲ್ಲಿ ಸೋಮವಾರ ಪಲ್ಟಿ ಬಿದ್ದಿದೆ.
ಲಾರಿ ಹೆದ್ದಾರಿಯ ಅರ್ಧಭಾಗ ಆಕ್ರಮಿಸಿ ಕೊಂಡಿದೆ. ಇದರಿಂದ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು.ಲಾರಿ ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿತ್ತು.ಲಾರಿ ಜಖಂ ಆಗಿದ್ದು, ಚಾಲಕ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.