ಶಿರಸಿ: ಉತ್ತರ ಕನ್ನಡ ಜಿಲ್ಲಾ ಶಿಕ್ಷಕ, ಶಿಕ್ಷಕಿಯರ ನಿರಂತರ ಸಹಾಯವಾಣಿ ಹಾಗೂ ಅನಿಷ್ಕ್ ಡಿಸೈನರ್ ಬುಟೀಕ್ ಶಿರಸಿ ವತಿಯಿಂದ ಮಹಿಳೆಯರಿಗಾಗಿ ಫ್ಯಾಷನ್ ಡಿಸೈನರ್ ಆಗುವ ಕನಸನ್ನು ನನಸಾಗಿಸಲು ನ.18 ರಂದು ಶನಿವಾರ ಇಲ್ಲಿನ ಸಾಮ್ರಾಟ್ ಹೊಟೆಲ್‌ನ ವಿನಾಯಕ ಹಾಲ್‌ನಲ್ಲಿ ಒಂದು ದಿನದ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯು ಬೆಳಿಗ್ಗೆ 10-30 ಘಂಟೆಯಿಂದ ಆರಂಭವಾಗಿ ಮಧ್ಯಾಹ್ನ 3-30ರ ವರೆಗೆ ನಡೆಯಲಿದೆ. ತರಬೇತಿಯಲ್ಲಿ ಡಿಸೈನರ್ ಬಟ್ಟೆ ಕತ್ತರಿಸುವ ಮತ್ತು ಹೊಲಿಯುವ ವಿಧಾನ, ವೈಯಕ್ತಿಕ ಅಧ್ಯಯನ ವಿಧಾನ, ಡ್ರಾಯಿಂಗ್ ಮತ್ತು ಕ್ರಾಫ್ಟಿಂಗ್, ಪೇಂಟಿಂಗ್, ವ್ಯಕ್ತಿತ್ವ ವಿಕಸನ, ಮಾರುಕಟ್ಟೆ ಸಮೀಕ್ಷೆ, ಡ್ರೆಸ್ ಡ್ರೇಪಿಂಗ್ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಭೀಮಣ್ಣ ನಾಯ್ಕ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅಥಿತಿಗಳಾಗಿ ಲೋಕಧ್ವನಿ ಸುದ್ದಿ ಸಂಪಾದಕಿ ಹಾಗೂ ದೂರದರ್ಶನ ಚಂದನ ವಾಹಿನಿಯ ಪ್ರತಿನಿಧಿ ವಿನುತಾ ಹೆಗಡೆ, ಎಮ್.ಎಮ್ ಆರ್ಟ್ಸ ಎಂಡ್ ಸೈನ್ಸ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಗಣೇಶ ಎಸ್. ಹೆಗಡೆ, ಜಿ.ಪಂ ಮಾಜಿ ಸದಸ್ಯೆಉಷಾ ಹೆಗಡೆ, ಕಾಮಧೇನು ಜ್ಯುವೆಲರ್ಸ್‌ನ ಮಾಲಕ ಪ್ರಕಾಶ ಪಾಲಂಕರ್, ಬೆಥೆಲ್ ಮಿನಿಸ್ಟರಿ ಎಂಡ್ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥ ಅನಿಲ ಮಡಗಾಂವಕರ್, ಶ್ರೀ ಪದ್ಮಾವತಿ ಇಂಟರ್‌ನ್ಯಾಷನಲ್ ಸ್ಕೂಲ್ ಅಥಣಿಯ ಅಧ್ಯಕ್ಷ ಡಾ. ಆನಂದ ಉಪಾಧ್ಯಾಯ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ Tel:+919880179177 ಅಥವಾ Tel:+9108384296094 ಈ ನಂಬರನ್ನು ಸಂಪರ್ಕಿಸಬಹುದಾಗಿದೆ.