ಶಿರಸಿ : ಆರೋಗ್ಯ ಭಾರತಿ ಹಾಗೂ ಅರಿವು ವೇದಿಕೆಯ ಆಶ್ರಯದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ ತಾಲೂಕಿನ ಯಡಳ್ಳಿಯ ಸುಕರ್ಮ ಯಾಗಶಾಲೆಯಲ್ಲಿ ಧನ್ವಂತರಿ ಹೋಮ ಶುಕ್ರವಾರ ನಡೆಯಿತು.
ಹವನದ ನೇತೃತ್ವವನ್ನು ವಿದ್ವಾನ್ ಪರಮೇಶ್ವರ ಅ.ಭಟ್ಟ ಪುಟ್ಟನಮನೆ ವಹಿಸಿದ್ದು, ಈ ಸಂಧರ್ಭದಲ್ಲಿ ಆರೋಗ್ಯ ಭಾರತಿ ಜಿಲ್ಲಾ ಅಧ್ಯಕ್ಷ ಡಾ. ವಿನಾಯಕ ಹೆಬ್ಬಾರ, ಕಾರ್ಯದರ್ಶಿ ಬಸವರಾಜ ಓಶಿಮಠ. ಪವಿತ್ರಾ ಹೊಸೂರ್, ಪದಾಧಿಕಾರಿಗಳಾದ ಡಿ.ಎಸ್.ಹೆಗಡೆ, ವಿ.ಆರ್ .ಭಟ್ ಅರಿವು ವೇದಿಕೆಯ ಜನಾರ್ಧನ ಆಚಾರ್ ಹಾಗೂ ಇತರರು ಉಪಸ್ಥಿತರಿದ್ದರು.