ಶಿರಸಿ: ಸಿದ್ದಾಪುರ ತಾಲೂಕಿನ ಕಾನಸೂರಿನ ಗೆಳೆಯರ ಬಳಗದಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸ.ಹಿ.ಪ್ರಾ ಶಾಲೆಯಲ್ಲಿ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ‘ಬೇಡರ ಕಣ್ಣಪ್ಪ’ ಯಕ್ಷಗಾನ ನ.1ರಂದು ರಾತ್ರಿ 8.30 ರಿಂದ ನಡೆಯಲಿದೆ.
ಕಾರ್ಯಕ್ರಮವನ್ನು ಉದ್ಯಮಿ ಆರ್.ಜಿ.ಶೇಟ್ ಉದ್ಘಾಟಿಸಲಿದ್ದು, ಗ್ರಾ.ಪಂ ಅಧ್ಯಕ್ಷೆ ಅನಿತಾ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಸ್ಕೋಡ್ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ, ಗ್ರಾ.ಪಂ ಉಪಾಧ್ಯಕ್ಷೆ ಸವಿತಾ ಕಾನಡೆ, ಸದಸ್ಯರಾದ ಶಶಿಕಾಂತ ನಾಮಧಾರಿ, ಮನೋಜ ಶಾನಭಾಗ, ಶಶಿಪ್ರಭಾ ಹೆಗಡೆ, ವೀರಭದ್ರ ಜಂಗಣ್ಣನವರ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಕಾನಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಶ್ಮೀ ಹಿರೇಮಠ, ಯಶಸ್ವಿ ಕ್ರೀಡಾಪಟು ಯಶಸ್ ಪ್ರವೀಣ ಕುರುಬರ ಇವರನ್ನು ಸನ್ಮಾನಿಸಿ, ಗೌರವಿಸಲಾಗುವುದು.
ಅಂದು ಬೆಳಿಗ್ಗೆ 9.45ಕ್ಕೆ ಕನ್ನಡ ಧ್ವಜರೋಹಣ ನಡೆಯಲಿದ್ದು, ನಂತರ ಕಾನಸೂರಿನಿಂದ ನಾಣಿಕಟ್ಟಾದವರೆಗೆ ಬೈಕ್ ಹಾಗೂ ರಿಕ್ಷಾದವರಿಂದ ಜಾಥಾ ಜರುಗಲಿದೆ. ಸಂಜೆ 7 ಘಂಟೆಯಿಂದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9.30ರಿಂದ ಆಯ್ದ ಅತಿಥಿ ಕಲಾವಿದರಿಂದ ನಕ್ಕು ನಗಿಸುವ “ಬೇಡರ ಕಣ್ಣಪ್ಪ” ಯಕ್ಷಗಾನ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣು ಮರಾಠಿ, ಮದ್ದಲೆಯಲ್ಲಿ ಶ್ರೀಪಾದ ಹೆಗಡೆ ಕಂಚಿಮನೆ, ಚಂಡೆಯಲ್ಲಿ ಧನಂಜಯ ನಾಯ್ಕ ವರದಪುರ, ಮುಮ್ಮೇಳದಲ್ಲಿ ಚಂದ್ರಶೇಖರ ಶೆಟ್ಟಿ, ಮಂಜುನಾಥ ನಾಣಿಕಟ್ಟಾ, ಸದಾನಂದ, ಉದಯ ಕಲ್ಲಾಳ, ದೇವೇಂದ್ರ ಇಡುವಾಣಿ, ಮಾರುತಿ, ವೆಂಕಟರಮಣ ಹೆಗಡೆ ಮಾದ್ನಕಳ, ಗಂಗಾಧರ ಹೆಗಡೆ ಕಟ್ನಹಕ್ಕಲು ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಘಟಕ ರಾಜು ಕಾನಸೂರು ತಿಳಿಸಿದ್ದಾರೆ.
ಜರುಗಲಿದೆ. ಸಂಜೆ ೭ ಘಂಟೆಯಿಂದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ೯.೩೦ ರಿಂದ ಆಯ್ದ ಅತಿಥಿ ಕಲಾವಿದರಿಂದ ನಕ್ಕು ನಗಿಸುವ “ಬೇಡರ ಕಣ್ಣಪ್ಪ” ಯಕ್ಷಗಾನ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣು ಮರಾಠಿ, ಮದ್ದಲೆಯಲ್ಲಿ ಶ್ರೀಪಾದ ಹೆಗಡೆ ಕಂಚಿಮನೆ, ಚಂಡೆಯಲ್ಲಿ ಧನಂಜಯ ನಾಯ್ಕ ವರದಪುರ, ಮುಮ್ಮೇಳದಲ್ಲಿ ಚಂದ್ರಶೇಖರ ಶೆಟ್ಟಿ, ಮಂಜುನಾಥ ನಾಣಿಕಟ್ಟಾ, ಸದಾನಂದ, ಉದಯ ಕಲ್ಲಾಳ, ದೇವೇಂದ್ರ ಇಡುವಾಣಿ, ಮಾರುತಿ, ವೆಂಕಟರಮಣ ಹೆಗಡೆ ಮಾದ್ನಕಳ, ಗಂಗಾಧರ ಹೆಗಡೆ ಕಟ್ನಹಕ್ಕಲು ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಘಟಕ ರಾಜು ಕಾನಸೂರು ತಿಳಿಸಿದ್ದಾರೆ