Slide
Slide
Slide
previous arrow
next arrow

ಶ್ರೀಕ್ಷೇತ್ರ ಕಲಗದ್ದೆಯಲ್ಲಿ ಒಂದು ವರ್ಷಗಳ ಕಾಲ ಜರುಗಲಿರುವ ಗಾಯತ್ರಿ ಮಹಾಯಜ್ಞ

300x250 AD

ಸಿದ್ದಾಪುರ: ಲೋಕ ಕಲ್ಯಾಣಾರ್ಥವಾಗಿ ಗಾಯತ್ರಿ ಮಹಾಸತ್ರ ಮಹಾನ್ ಸಂಕಲ್ಪ ಕಾರ್ಯಕ್ರಮದಲ್ಲಿ ಒಂದು ವರ್ಷಗಳ ಕಾಲ ಗಾಯತ್ರೀ ಯಜ್ಞ ನಡೆಸಲು ತಾಲೂಕಿನ  ಶ್ರೀಕ್ಷೇತ್ರ ಕಲಗದ್ದೆಯ ಶ್ರೀ ನಾಟ್ಯ ವಿನಾಯಕ ಹಾಗೂ ಶ್ರೀ ಲಲಿತಾ ರಾಜರಾಜೇಶ್ವರಿ ದೇವಸ್ಥಾನದಲ್ಲಿ  ಸಂಕಲ್ಪಿಸಲಾಗಿದೆ ಎಂದು ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ತಿಳಿಸಿದ್ದಾರೆ.

ಇದೇ ಬರುವ ಅ.30 ರಿಂದ ಪ್ರಾರಂಭಗೊಂಡು 2024ರ ಅ.30ರ ತನಕ ನಿತ್ಯ ದೇವಾಲಯದಲ್ಲಿ ಗಾಯತ್ರೀ ಯಜ್ಞ ನಡೆಯಲಿದೆ. ಅಂದು ಬೆಳಿಗ್ಗೆ 7:15 ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಈ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದ್ದು ಪೂರ್ವಾಂಗ ಕಾರ್ಯಕ್ರಮಗಳು, ಪುಣ್ಯಾಹ, ಗಣ ಹವನ, ಅಗ್ನಿ ಜನನ ಇತ್ಯಾದಿ ಕಾರ್ಯಕ್ರಮಗಳು ಅಂದು ನಡೆಯಲಿವೆ. 

300x250 AD

ಅ.31 ರಂದು ಬೆಳಿಗ್ಗೆ ಸುಮಂಗಲಿಯರಿಂದ ಕುಂಕುಮಾರ್ಚನೆ, ಬೆಳಿಗ್ಗೆ 11ಕ್ಕೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಜಿಗಳ ಆಗಮನ, ಪಾದಪೂಜೆ ಹಾಗೂ ಶ್ರೀಗಳಿಂದ ಪೂರ್ಣಾಹುತಿ, ಆಶೀರ್ವಚನ ನಡೆಯಲಿದೆ ಎಂದು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top