ಕುಮಟಾ: ತಾಲೂಕಿನ ಮಿರ್ಜಾನ್ನ ರಾಷ್ಟ್ರೀಯ ಹೆದ್ದಾರಿ 66ರ ದರ್ಗಾ ಕ್ರಾಸ್ ಬಳಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇದಕ್ಕೆ ಐಆರ್ಬಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಐಆರ್ಬಿಯು ಈ ಭಾಗದಲ್ಲಿ ಅವೈಜ್ಞಾನಿಕ ಚತುಷ್ಪಥ ಕಾಮಗಾರಿ ಕೈಗೊಂಡ ಪರಿಣಾಮ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತ ಸಾಗಿದೆ. ಕಳೆದ ವಾರ ಇಬ್ಬರು ಅಪಘಾತದಿಂದ ಕೈಕಾಲು ಮುರಿದುಕೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಸ್ಥಳೀಯರು ಆತಂಕಗೊಳ್ಳುವಂತಾಗಿದೆ. ದರ್ಗಾ ಕ್ರಾಸ್ನ ಬಳಿ ಆದಿಚುಂಚನಗಿರಿ ವಿದ್ಯಾ ಸಂಸ್ಥೆ ಇದೆ. ಅಲ್ಲದೇ ಅಂಗನವಾಡಿ ಕೇಂದ್ರ, ಸರಕಾರಿ ಕಿ.ಪ್ರಾ.ಶಾಲೆ ಉರ್ದು ಪ್ರೌಢಶಾಲೆಯಿದೆ. ಹೊಸ್ಮನೆ, ತಾರೀಬಾಗಿಲ, ಪ್ಲೂಟ್ಕೇರಿ ಉಪ ರಸ್ತೆ ಚತುಷ್ಪಥ ರಸ್ತೆಗೆ ಕೂಡಿದೆ. ನೂರಾರು ಶಾಲಾ ಮಕ್ಕಳು ಬಸ್ ಹತ್ತಲು ಇಳಿಯಲು ಇದೇ ಮಾರ್ಗ ಅವಲಂಬಿತರಾಗಿದ್ದಾರೆ.
ದರ್ಗಾ ಕ್ರಾಸ್ ಬಳಿಸ ಸ್ಪೀಡ್ ಬ್ರೇಕರ್ ಅಳವಡಿಸುವದರ ಜೊತೆ ವೇಗದ ಮಿತಿ ಕಡಿಮೆಗೊಳಿಸುವ ನಾಮಫಲಕ ಹಾಗೂ ಅಪಘಾತ ವಲಯ ಎಂದು ಗುರುತಿಸುವ ನಾಮಫಲಕ ಅಳವಡಿಸಿ ಅಪಘಾತ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಈ ಹಿಂದೆ ನಿರ್ಮಾಣಗೊಂಡ ಬಸ್ ಸ್ಟ್ಯಾಂಡ್ ಚತುಷ್ಪಥ ರಸ್ತೆಗೆ ಆಹುತಿಯಾಗಿದ್ದು, ಪುನಃ ಬಸ್ ಸ್ಟಾಂಡ್ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಮೀಯಾ ಸಾಬ್ ಎಚ್ಚರಿಸಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ದರ್ಗಾ ಕ್ರಾಸ್ ಬಳಿ ಸ್ವತಃ ಬೈಕ್ ಅಪಘಾತಕ್ಕೀಡಾಗಿ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತçಚಿಕಿತ್ಸೆ ಮೂಲಕ ಗುಣಮುಖರಾದ ಶಾಲಾ ಮಾಜಿ ಅಧ್ಯಕ್ಷ ರಾಮನಾಥ ಬಾಬುರಾಯ ನಾಯ್ಕ ತಮ್ಮ ಅನುಭವವನ್ನು ‘ನುಡಿಜೇನು’ ಪತ್ರಿಕೆ ಬಳಿ ಹಂಚಿಕೊAಡಿದ್ದಾರೆ. ಆಯ್ಆರ್ಬಿಯವರ ಚತುಷ್ಪಥ ಕಾಮಗಾರಿಕೆಯಿಂದಲೇ ಇವೆಲ್ಲ ಆವಾಂತರಗಳು ಹೆಚ್ಚುತ್ತಿದ್ದು, ಅಪಘಾತ ತಡೆಯಲು ಹಿರೇಗುತ್ತಿ ಗ್ರಾಮದಲ್ಲಿ ನಾಲ್ಕು ಸ್ಪೀಡ್ ಬ್ರೇಕರ ಅಳವಡಿಸಿದಂತೆ, ಇಲ್ಲಿಯೂ ಹಂಪ್ ಅಳವಡಿಸಬೇಕು. ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ರಸ್ತೆ ತಡೆದು, ಹೋರಾಟ ಮಾಡಲಾಗುವುದು. ಅದಕ್ಕೆ ಆಸ್ಪದ ನೀಡದೇ ಆಯ್ಆರ್ಬಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪರಮೇಶ್ವರ ಆಗ್ನು ಹುಲಸ್ವಾರ, ಗಂಗಾಧರ ನಾರಾಯಣ ನಾಯ್ಕ, ರಾಮಕೃಷ್ಣ ಗೋವಿಂದ ಪಟಗಾರ, ಹನುಮಂತ ಯಮನೂರು ಶಬ್ಬೀರ ಸೈಯದ, ವಿಲಿಯಂ ಗಾಸ್ಪರ, ಮುಕ್ತಿಯಾರ ಖಾಜಿ ಮುಂತಾದವರು ಪಾಲ್ಗೊಂಡಿದ್ದರು.