Slide
Slide
Slide
previous arrow
next arrow

ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಸಮಸ್ಯೆ: ಪರಿಹಾರಕ್ಕೆ ಆಗ್ರಹ

300x250 AD

ಭಟ್ಕಳ: ತಾಲೂಕಿನ ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯ ರಹ್ಮತಾಬಾದ್ (ಅಬುಬಕರ್ ಮಸೀದಿ ಬಳಿ), ಹನಿಫಾಬಾದ್, ಜಾಮಿಯಾಬಾದ್ ರೋಡ್ (ನ್ಯೂ ಶಮ್ಸ್ ಸ್ಕೂಲ್ ಬಳಿ), ಜಾಮಿಯಾ ಜಾಲಿ ಉರ್ದು ಸರ್ಕಾರಿ ಪ್ರೌಢಶಾಲೆ ಬಳಿ, ಸರಗಂಟೆ ದೇವಸ್ಥಾನ ರಸ್ತೆ, ಮೀನಾ ರೋಡ್ ಹೀಗೆ ಹತ್ತಾರು ಕಡೆ ರಸ್ತೆಯ ಇಕ್ಕೆಲಗಳಲ್ಲಿ ರಾಶಿ ರಾಶಿ ಘನ ತ್ಯಾಜ್ಯ ಬಿದ್ದುಕೊಂಡಿದ್ದು, ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕೆಂದು ತಂಝೀಮ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಈ ಸಮಸ್ಯೆ ಕುರಿತಂತೆ ತಂಝೀಮ್ ಸಂಸ್ಥೆಯು ಹಲವಾರು ಬಾರಿ ತಾಲೂಕಾಡಳಿತ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಸ್ಥಳಿಯರು ಕೂಡ ಹಲವು ಬಾರಿ ಮನವಿ ಪತ್ರ ಸಲ್ಲಿಸಿ ಹೋರಾಟವನ್ನು ಮಾಡಿದ್ದಾರೆ. ಭಟ್ಕಳ ತಾಲೂಕಿನಲ್ಲಿ ಡೆಂಗ್ಯೂ ಜ್ವರವು ಹರಡುತ್ತಿದ್ದು ಗಲ್ಲಿ ಮೋಹಲ್ಲಾ ಗಳಲ್ಲಿ ಬಿದ್ದುಕೊಂಡಿರುವ ಕಸದ ರಾಶಿಯಿಂದಾಗಿ ಈ ರೋಗ ಮತ್ತಷ್ಟು ಉಲ್ಭಣಗೊಳ್ಳುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಸ್ತೆ ಬದಿಯಲ್ಲಿ ತಿಂಗಳುಗಟ್ಟಲೆ ಬಿದ್ದುಕೊಂಡಿರುವ ಕಸದ ರಾಶಿಯಲ್ಲಿ ನಾಯಿ, ದನಕರುಗಳು ತ್ಯಾಜ್ಯ ತಿನ್ನುತ್ತವೆ. ಬೀದಿನಾಯಿಗಳು  ಕಸ ಎಳೆದಾಡಿ ರಸ್ತೆಗೆ ತರುತ್ತಿವೆ. ದಾರಿಹೋಕರಿಗೆ ಬೀದಿನಾಯಿಗಳ ಭಯ ಕಾಡುತ್ತಿದೆ. ಈ ಭಾಗದಲ್ಲಿ ನಾಲ್ಕು ಖಾಸಗಿ ಹಾಗೂ ನಾಲ್ಕು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ ನಿತ್ಯವೋ 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಓಡುತ್ತಾರೆ. ಅಲ್ಲದೆ ಶಾಲಾ ವಾಹನಗಳು, ಮಕ್ಕಳನ್ನು ಶಾಲೆಗೆ ಬಿಡುವ ಪಾಲಕರು ದಿನಾಲೂ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ತಿಂಗಳುಗಟ್ಟಲೆ ಬಿದ್ದುಕೊಂಡಿರುವ ಕಸದ ರಾಶಿಯಿಂದ ಕ್ರಿಮಿಕೀಟಗಳು, ಸೊಳ್ಳೆಗಳು ಉತ್ಪತ್ತಿಗೊಂಡು ಶಾಲಾ ಮಕ್ಕಳ ಮತ್ತು ಈ ಭಾಗದಲ್ಲಿ ವಾಸಿಸುವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿವೆ. ಸಾರ್ವಜನಿಕರಿಗೆ ಎಷ್ಟೇ ಜಾಗೃತಿಯನ್ನು ಮೂಡಿಸದರೂ ಅವರು ಕಸವನ್ನು ಹಾಕಲು ಯಾವುದೇ ಸಮರ್ಪಕ ಸ್ಥಳ ಇಲ್ಲದ ಕಾರಣ ರಸ್ತೆಗೆ ತಂದು ಎಸೆದು ಹೋಗುತ್ತಿದ್ದಾರೆ.

300x250 AD

ಪಂಚಾಯತ್ ವತಿಯಿಂದ ಸಮರ್ಪಕವಾಗಿ ತ್ಯಾಜ್ಯವಿಲೇವಾರಿ ಮಾಡುವುದಿಲ್ಲವೂ ಅಲ್ಲಿಯವರೆಗೆ ಇಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೆ ಇರುತ್ತವೆ. ಪಂಚಾಯತ್ ನವರಿಗೆ ಮನವಿ ಕೊಟ್ಟು ಕೊಟ್ಟು ಈ ಭಾಗದ ಜನರು ಬೇಸತ್ತಿದ್ದಾರೆ. ಸಾರ್ವಜನಿಕರು ಆಕ್ರೋಶಗೊಂಡು ಹೋರಾಟಕ್ಕಿಳಿಯುವ  ಮುನ್ನ ದಯಮಾಡಿ ಇದಕ್ಕೊಂದು ವ್ಯವಸ್ಥೆ ಮಾಡಿಕೊಡಿ. ಜಿಲ್ಲಾಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಅಬ್ದುಲ್ ರಕೀಬ್ ಆಗ್ರಹಿಸಿದ್ದಾರೆ.

ಇಲ್ಲಿನ ಅಸಮರ್ಪಕ ಕಸ ವಿಲೆವಾರಿ, ಕುಡಿಯುವ ನೀರಿನ ಸಮಸ್ಯೆ, ಸರಿಯಾದ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದಿರುವುದು ಇಂತಹ ಹಲವು ಸಮಸ್ಯೆಗಳಿಂದ ಬೇಸತ್ತಿರುವ ರಹ್ಮತಾಬಾದ್, ಹನಿಫಾಬಾದ್, ಜಾಮಿಯಾಬಾದ್ ರಸ್ತೆಯ ನಿವಾಸಿಗಳು ತಮ್ಮ ಪ್ರದೇಶವನ್ನು ಭಟ್ಕಳ ಪುರಸಭೆ ಅಥವಾ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಕೂಡಲೆ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕಾಡಳಿತ, ಜಿಲ್ಲಾಡಳಿತ ಇತ್ತಕಡೆ ಗಮನ ಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top