Slide
Slide
Slide
previous arrow
next arrow

ಭಾರತೀಯ ನೌಕಾದಳದ 224 ಹುದ್ದೆಗಳಿಗೆ ಅರ್ಜಿ ಆಹ್ವಾನ

300x250 AD

ಕಾರವಾರ: ಭಾರತೀಯ ನೌಕಾದಳದಲ್ಲಿ ಖಾಲಿ ಇರುವ ಜನರಲ್ ಸರ್ವೀಸ್, ಏರ್ ಟ್ರಾಫಿಕ್ ಕಂಟ್ರೋಲರ್, ನೇವಲ್ ಏರ್ ಆಪರೇಶನ್ಸ್ ಆಫೀಸರ್ ಸೇರಿ 224 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 29 ಕೊನೆಯ ದಿನ.

ಜನರಲ್ ಸರ್ವೀಸ್ 40, ಏರ್ ಟ್ರಾಫಿಕ್ ಕಂಟ್ರೋಲರ್ 66, ನೇವಲ್ ಏರ್ ಆಪರೇಶನ್ಸ್ ಆಫೀಸರ್ 66 ಹುದ್ದೆ, ಪೈಲಟ್ 66, ಎಂಜಿನಿಯರ್ ಬ್ರ‍್ಯಾಂಚ್ (ಜನರಲ್ ಸರ್ವೀಸ್- ಜಿಎಸ್) 30, ಎಲೆಕ್ಟ್ರಿಕಲ್ ಬ್ರ‍್ಯಾಂಚ್ (ಜನರಲ್ ಸರ್ವೀಸ್- ಜಿಎಸ್) 50, ನೇವಲ್ ಕನ್‌ಸ್ಟ್ರಕ್ಟರ್ 20 ಹುದ್ದೆಗಳಿಗೆ ಬಿಇ/ ಬಿ.ಟೆಕ್ ಹಾಗೂ ಲಾಜಿಸ್ಟಿಕ್ಸ್ 66 ಹುದ್ದೆಗಳಿಗೆ ಬಿ.ಕಾಂ, ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂಸಿಎ, ಎಂ.ಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು.

ಅರ್ಜಿ ಶುಲ್ಕ, ವೇತನದ ವಿವರ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 56,100 ರೂ. ದೊರೆಯಲಿದೆ. ಭಾರತದ ಎಲ್ಲಿ ಬೇಕಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ, ಮೆಡಿಕಲ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

300x250 AD

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಹಾಗೂ ಇತರ ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್‌ಸೈಟ್ www.indiannavy.nic.in ಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

Share This
300x250 AD
300x250 AD
300x250 AD
Back to top