Slide
Slide
Slide
previous arrow
next arrow

ನಗರಸಭೆಯ ಸಾಮಾನ್ಯ ಸಭೆ: ಖರ್ಚು- ವೆಚ್ಚದ ಕುರಿತು ಚರ್ಚೆ

300x250 AD

ದಾಂಡೇಲಿ: ನಗರಸಭೆಯ ಸಾಮಾನ್ಯ ಸಭೆಯು ನಗರಸಭೆಯ ಆಡಳಿತಾಧಿಕಾರಿ ಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧ್ಯಕ್ಷತೆಯಲ್ಲಿ ಬುಧವಾರ ನಗರಸಭೆಯ ಸಭಾಭವನದಲ್ಲಿ ಜರುಗಿತು.

ಸಭೆಯಲ್ಲಿ ಹಿಂದಿನ ಸಾಮಾನ್ಯ ಸಭೆಯ ನಡವಳಿಕೆಗಳನ್ನು ದೃಢೀಕರಿಸಲಾಯಿತು. ವಿವಿಧ ಅನುದಾನದಡಿಯಲ್ಲಿ ಕರೆದ ಟೆಂಡರ್ ದರವಾರುಗಳನ್ನು ಪರಿಶೀಲಿಸಿ ಮಂಜೂರಿ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಬಿಲೋ ದರವನ್ನು ನಮೂದಿಸಿ ಟೆಂಡರ್ ಹಾಕಲಾಗುತ್ತಿದೆ. ಆದರೆ ಕಾಮಗಾರಿ ಮಾತ್ರ ಗುಣಮಟ್ಟದಿಂದ ನಡೆಯುವುದಿಲ್ಲ. ಕಾಮಗಾರಿಯ ಗುಣಮಟ್ಟದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕೆಂದು ಜಿಲ್ಲಾಧಿಕಾರಿ ಹೇಳಿದರು.

2023-24ನೇ ಸಾಲಿನ 15 ನೇ ಹಣಕಾಸು ಮತ್ತು ನಗರಸಭೆ ನಿಧಿ, ಎಸ್‌ಎಫ್‌ಸಿ ಶೇ 24.10%, ಶೇ 7.5% ಮತ್ತು ಶೇ 5% ಕ್ರಿಯಾ ಯೋಜನೆಯ ಮಂಜೂರಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನಾಲ್ಕು ಜನ ಡಾಟಾ ಎಂಟ್ರಿ ಆಪರೇಟರ್‌ಗಳ ಬಗ್ಗೆ ಟೆಂಡರ್ ಕರೆಯಲು ಮಂಜೂರಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಜನವರಿಯಿಂದ -ಜುಲೈ 2023ರವರೆಗಿನ ಜಮಾ ಖರ್ಚಿನ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಜಿಲ್ಲಾಧಿಕಾರಿ ಲೆಕ್ಕಪತ್ರಗಳ ಕುರಿತು ವಿಚಾರಿಸಿ, ಜಮಾ ಖರ್ಚಿನ ಕುರಿತಂತೆ ವಿವಿಧ ಪ್ರಶ್ನೆಗಳನ್ನು ಹಾಕಿದರು. ನಗರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಜಾಹೀರಾತು ಫಲಕಗಳನ್ನು ಹಾಕಲಾಗುತ್ತಿದ್ದರೂ, ಜಾಹೀರಾತಿನ ಮೊತ್ತ ಸಂಗ್ರಹಣೆಯಲ್ಲಿ ನಗರಸಭೆ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆಗೆ ಬರುವ ವಿವಿಧ ಮೂಲಗಳಿಂದ ಬರುವ ಆದಾಯವನ್ನು ಜಮಾ ಮಾಡುವಲ್ಲಿ ಹಿನ್ನಡೆ ಸಾಧಿಸಿರುವುದು ಸರಿಯಲ್ಲ. ಮುಂದೆ ಹೀಗಾಗಬಾರದಾಗಿ ಸೂಚನೆಯನ್ನು ನೀಡಿದರು.

300x250 AD

ಒಳಚರಂಡಿ ಮಂಡಳಿಯವರ ಪತ್ರದಂತೆ ನಗರದಲ್ಲಿ ಒಳಚರಂಡಿಗೆ ಮನೆಮನೆ ಸಂಪರ್ಕ ನೀಡಲು ದರ ನಿಗದಿ ಪಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆದಾಗ ನಗರಸಭೆಯ ಸದಸ್ಯರಾದ ರೋಷನಜಿತ್ ಅವರು ನಮ್ಮ ವಾರ್ಡಿನಲ್ಲಿ ಯುಜಿಡಿ ಕಾಮಗಾರಿಯೆ ನಡೆದಿಲ್ಲ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದರು. ಯುಜಿಡಿ ಕಾಮಗಾರಿ ಇನ್ನೂ ಮುಗಿಯದೇ ಇದ್ದರೂ ಕೆಲಸ ಪೂರ್ಣಗೊಂಡಿದೆ ಎಂದು ಯಾಕೆ ಹೇಳಿದ್ದೀರಿ ಎಂದು ಒಳಚರಂಡಿ ಮಂಡಳಿಯ ಅಧಿಕಾರಿಗಳನ್ನು ಮತ್ತು ಯುಜಿಡಿ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದೇ ಸಮಯದಲ್ಲಿ ಯುಜಿಡಿ ಗುತ್ತಿಗೆ ಸಂಸ್ಥೆಯವರು ನಗರಸಭೆಯ ಅಧೀನದ ಜಾಗದಲ್ಲಿ ಸಂಸ್ಥೆಯ ಕಚೇರಿ ಕಟ್ಟಡ ಹಾಗೂ ಸರಕು ಸಾಮಗ್ರಿಗಳನ್ನು ದಾಸ್ತಾನು ಮಾಡಲು ಪಡೆದುಕೊಂಡ ಜಾಗಕ್ಕೆ ಈವರೆಗೆ ಬಾಡಿಗೆ ನೀಡದಿರುವುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಆಗ ಯುಜಿಡಿ ಗುತ್ತಿಗೆ ಸಂಸ್ಥೆಯ ವ್ಯವಸ್ಥಾಪಕರಾದ ಆನಂದ ದೀಕ್ಷಿತ್ ಅವರು ಅಸಮರ್ಪಕ ಉತ್ತರವನ್ನು ನೀಡಿದರು. ಕೂಡಲೇ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಗರಸಭೆಯ ಜಾಗವನ್ನು ಉಪಯೋಗಿಸಿರುವುದಕ್ಕೆ ಸೂಕ್ತ ರೀತಿಯಲ್ಲಿ ಲೋಕೊಪಯೋಗಿ ಇಲಾಖೆಯ ನಿಯಮಾವಳಿಯಂತೆ ಬಾಡಿಗೆಯನ್ನು ನಗರಸಭೆಗೆ ನೀಡಬೇಕೆಂದು ಸೂಚನೆಯನ್ನು ನೀಡಿದರು. ಯುಜಿಡಿ ಕಾಮಗಾರಿ ಪೂರ್ಣಗೊಂಡು ನಗರಸಭೆಗೆ ಹಸ್ತಾಂತರಿಸುವ ಮುನ್ನವೇ ವಿದ್ಯುತ್ ಬಿಲ್ಲನ್ನು ನಗರಸಭೆಗೆ ನೀಡಿರುವುದರ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ವಿದ್ಯುತ್ ಬಿಲ್ಲನ್ನು ಯುಜಿಡಿ ಗುತ್ತಿಗೆ ಸಂಸ್ಥೆ ಇಲ್ಲವೇ ಒಳಚರಂಡಿ ಮಂಡಳಿಯೆ ಭರಿಸುವಂತೆ ಸೂಚನೆಯನ್ನು ನೀಡಿದರು.

Share This
300x250 AD
300x250 AD
300x250 AD
Back to top