Slide
Slide
Slide
previous arrow
next arrow

ಹಲ್ಲೆಗೊಳಗಾಗಿದ್ದವನ ಮನೆಗೆ ಡಿಸಿ ಭೇಟಿ – ಕುಟುಂಬಕ್ಕೆ ಸಾಂತ್ವನ

300x250 AD

ಮುಂಡಗೋಡ: ಇತ್ತೀಚೆಗೆ ತಾಲೂಕಿನ ನ್ಯಾಸರ್ಗಿಯಲ್ಲಿ ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿ ಸಾವನ್ನಪ್ಪಿದ ಮಂಜುನಾಥ ಭೋವಿ ಅವರ ಮನೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಭೇಟಿ ನೀಡಿ ಕುಟಂಬಕ್ಕೆ ಸಾಂತ್ವನ ಹೇಳಿದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ಡಿಸಿ, ಸರಕಾರದಿಂದ ಬರುವ ಪರಿಹಾರ ನೀಡುವ ಭರವಸೆ ನೀಡಿದರು. ಮೃತನ ಪತ್ನಿಗೆ ಪ್ರತಿ ತಿಂಗಳು 6500 ರೂ. ಪಿಂಚಣಿ ನೀಡಲಾಗುವುದು. ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಲಾಗುವುದು. ಈ ಬಗ್ಗೆ ಕುಟುಂಬದವರು ಚರ್ಚೆ ಮಾಡಿ ಯಾರಿಗೆ ಉದ್ಯೋಗ ನೀಡುವಂತೆ ಹೇಳುತ್ತೀರೋ ಅವರಿಗೆ ನೀಡಲಾಗುವುದು. ನಿಮ್ಮ ರಕ್ಷಣೆಗೆ ಸರಕಾರ ಇದೆ. ಯಾರೂ ಹೆದರುವ ಅವಶ್ಯವಿಲ್ಲ. ಘಟನೆಯ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು. ಮನೆಯ ಎಲ್ಲ ರೂಮಗಳನ್ನು ನೋಡಿ ಮರಗಿದರು. ಅಲ್ಲದೇ, ಮನೆಯಲ್ಲಿ ಕರೆಂಟ್ ಇಲ್ಲದಿರುವುದನ್ನು ನೋಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿಪಡಿಸುವಂತೆ ಸೂಚಿಸಿದರು.

ಈ ವೇಳೆ ಉಪವಿಭಾಗಾಧಿಕಾರಿ ದೇವರಾಜ ಆರ್., ತಹಶೀಲ್ದಾರ ಶಂಕರ ಗೌಡಿ, ತಾ.ಪಂ ಎಡಿ ಟಿ.ವೈ.ದಾಸನಕೊಪ್ಪ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ದಯ್ಯನವರ, ಸಿಪಿಐ ಎಸ್.ಬಿ.ಲೋಕಾಪುರ, ದಲಿತ ಮುಖಂಡರಾದ ಬಸವರಾಜ ಸಂಗನೇಶ್ವರ, ಬಸವರಾಜ ಹಳ್ಳಮ್ಮನವರ, ಹನಮಂತ ಆರೆಗೋಪ್ಪ, ದುರ್ಗಪ್ಪ ವಡ್ಡರ, ರಾಜು ಭೋವಿ ಮುಂತಾದವರು ಉಪಸ್ಥಿತರಿದ್ದರು.

300x250 AD

ಗ್ರಾಮದಲ್ಲಿ ಎಲ್ಲರೂ ಏಕತೆಯಿಂದ ಇರಬೇಕೆನ್ನುವುದು ಸರ್ಕಾರದ ಉದ್ದೇಶ. ನಮ್ಮದು ಜಾತ್ಯಾತೀತ ರಾಷ್ಟ್ರ. ಜಾತಿ, ಬೇದ, ಮತ ಮರೆತು ನಾವೇಲ್ಲರೂ ಒಂದಾಗಿ ಬಾಳುಬೇಕೆಂದು ಸರ್ಕಾರದ ಸಾಕಷ್ಟು ನಿಯಮಗಳಿವೆ. ಸಿಟ್ಟಿನ ಭರದಲ್ಲಿಯೋ, ಜಾತಿ ವೈಶಮ್ಯದಿಂದಾಗಿ ಈ ರೀತಿ ಘಟನೆ ಆಗಬಾರದು. ಇದರಿಂದ ಕೇವಲ ಗ್ರಾಮಕ್ಕೆ ಅಷ್ಟೇ ಅಲ್ಲ, ದೇಶಕ್ಕೆ ಕೆಟ್ಟ ಹೆಸರು. ಸರಕಾರದಿಂದ ಆ ಕುಟುಂಬಕ್ಕೆ ಸಹಾಯ, ಸಹಾಕರ ತಲುಪಿಸಿದ್ದೇವೆ. ಆದರೆ ನೆರೆಹೊರೆಯವರು ಆ ಕುಟುಂಬದ ಜೊತೆಗೆ ನಿಂತು ಸಮಾಧಾನ ಹೇಳುವುದು ಮುಖ್ಯವಾಗಿದೆ. ಆ ಕೆಲಸವನ್ನು ನೀವುಗಳು ಮಾಡಬೇಕು. ಮುಂದೆ ಗ್ರಾಮದಲ್ಲಿ ಈ ರೀತಿ ಹೀಗಾಗದಂತೆ ನೋಡಿಕೊಳ್ಳಿ.

      –  ಗಂಗೂಬಾಯಿ ಮಾನಕರ್, ಜಿಲ್ಲಾಧಿಕಾರಿ 

Share This
300x250 AD
300x250 AD
300x250 AD
Back to top